ಇ-ಸಮಿತಿಯ ಬಗ್ಗೆ
ಭಾರತದ ಸವೋಚ್ಛ ನ್ಯಾಯಾಲಯದ ಇ-ಸಮಿತಿಯು ಭಾರತದಲ್ಲಿ ನ್ಯಾಯಾಂಗ ವ್ಯವಸ್ಥೆಯು ಅಳವಡಿಸಿಕೊಂಡ ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ (ಐಸಿಟಿ) ಉಪಕ್ರಮಗಳನ್ನು ಪ್ರದರ್ಶಿಸುವ ಈ ಪೋರ್ಟಲ್‍ಗೆ ನಿಮ್ಮನ್ನು ಸ್ವಾಗತಿಸುತ್ತದೆ.
ಇ-ಸಮಿತಿಯು “ಭಾರತೀಯ ನ್ಯಾಯಾಂಗ ವ್ಯವಸ್ಥೆ 2005 ರಲ್ಲಿ ಮಾಹಿತಿ ಮತ್ತು ಸಂವಹನ ತಂತ್ರಜ್ಞಾನದ (ಐಸಿಟಿ) ಅನುಷ್ಠಾನಕ್ಕಾಗಿ ರಾಷ್ಟ್ರೀಯ ಕಾರ್ಯನೀತಿ ಮತ್ತು ಕ್ರಿಯಾ ಯೋಜನೆ” ಅಡಿಯಲ್ಲಿ ಪರಿಕಲ್ಪಿಸಲಾದ ಇ-ನ್ಯಾಯಾಲಯಗಳ ಯೋಜನೆಯನ್ನು ಮೇಲ್ವಿಚಾರಣೆ ಮಾಡುವ ನಿರ್ವಾಹಕ ಸಂಸ್ಥೆಯಾಗಿದೆ.
ಇ-ನ್ಯಾಯಾಲಯಗಳು, ಪ್ಯಾನ್ ಇಂಡಿಯಾ ಯೋಜನೆಯಾಗಿದ್ದು, ಇದಕ್ಕೆ ಭಾರತ ಸರ್ಕಾರದ ನ್ಯಾಯ ಇಲಾಖೆ, ಕಾನೂನು ಮತ್ತು ನ್ಯಾಯ ಸಚಿವಾಲಯ ಮೇಲ್ವಿಚಾರಣೆ ಮಾಡಿ ಹಣಕಾಸು ನೆರವು ಒದಗಿಸುತ್ತದೆ. ನ್ಯಾಯಾಲಯಗಳ ಐಸಿಟಿ ಸಾಮಥ್ರ್ಯದ ಮೂಲಕ ದೇಶದ ನ್ಯಾಯಾಂಗ ವ್ಯವಸ್ಥೆಯನ್ನು ಪರಿವರ್ತಿಸುವ ಗುರಿಯನ್ನು ಇಟ್ಟುಕೊಂಡಿದೆ.
ಯೋಜನೆಯ ಸ್ಥೂಲನೋಟ
- ಇ-ನ್ಯಾಯಾಲಯ ಯೋಜನಾ ಕಕ್ಷಿಗಾರರ ಸನ್ನಿಧಿಗೆ ಅನುಗುಣವಾಗಿ ಸಮರ್ಥ ಮತ್ತು ಕಾಲಬದ್ಧ ಸಮಯಕ್ಕೆ ನಾಗರಿಕ ಕೇಂದ್ರಿತ ಸೇವೆಗಳನ್ನು ಒದಗಿಸುವುದು.
- ನ್ಯಾಯಾಲಯಗಳಲ್ಲಿ ಸಮರ್ಥ ನ್ಯಾಯ ವಿತರಣಾ ವ್ಯವಸ್ಥೆಗಳನ್ನು ಅಭಿವೃದ್ದಿಪಡಿಸುವುದು, ನೆಲೆಗೊಳಿಸುವುದು ಮತ್ತು ಕಾರ್ಯಗತಗೊಳಿಸುವುದು.
- ತನ್ನ ಹಿತಾಸಕ್ತಿದಾರರಿಗೆ ಮಾಹಿತಿಯನ್ನು ಪಡೆಯಲು ಸುಗಮವಾಗುವಂತೆ ಪ್ರಕ್ರಿಯೆಗಳನ್ನು ಸ್ವಯಂಚಾಲಿತವಾಗಿ ಮಾಡುವುದು.
- ನ್ಯಾಯಾಂಗ ವಿತರಣಾ ವ್ಯವಸ್ಥೆಯನ್ನು ಸುಲಭವಾಗಿ ಪಡೆಯಲು, ಮಿತವ್ಯಯಕಾರಿಯಾಗಿ ಹಾಗೂ ವಿಶ್ವಾಸಾರ್ಹ ಮತ್ತು ಪಾರದರ್ಶಕವಾಗಿ ಮಾಡುವ ಮೂಲಕ ಗುಣಾತ್ಮಕವಾಗಿ ಮತ್ತು ಪರಿಮಾಣಾತ್ಮಕವಾಗಿ, ನ್ಯಾಯಾಂಗದ ಉಪಯುಕ್ತತೆಯನ್ನು ಹೆಚ್ಚಿಸುವುದು.