Close

    ರಾಷ್ಟ್ರೀಯ ನ್ಯಾಯಿಕ ದತ್ತಾಂಶ ಜಾಲ

    njdg

    ರಾಷ್ಟ್ರೀಯ ನ್ಯಾಯಿಕ ದತ್ತಾಂಶ ಜಾಲ ರಾಷ್ಟ್ರೀಯ ನ್ಯಾಯಿಕ ದತ್ತಾಂಶ ಜಾಲವು, ನ್ಯಾಯಾಲಯಗಳ ಯೋಜನೆ ಆಶ್ರಯದ ಅಡಿಯಲ್ಲಿ ಅನುಷ್ಠಾನಗೊಂಡ ಸ್ಥಿತಿ ಸೂಚಕ ಪ್ರಾಜೆಕ್ಟ್ ಆಗಿದ್ದು, ಭಾರತ ಸರ್ಕಾರದ ವ್ಯವಹಾರ ಉಪಕ್ರಮವನ್ನು ಸುಲಭವಾಗಿ ಮಾಡುವುದರ ಅಡಿಯಲ್ಲಿ ಮಹತ್ವ ಪೂರ್ಣ ಹೊಸತನವೆಂದು ಗುರುತಿಸಲಾಗಿದೆ. ಈ ಪೋರ್ಟಲ್ ದೇಶದ ಎಲ್ಲಾ ಜಿಲ್ಲಾ ಹಾಗೂ ತಾಲ್ಲೂಕು ನ್ಯಾಯಾಲಯಗಳಲ್ಲಿ ಬಾಕಿಯಿರುವ ಹಾಗೂ ವಿಲೆಯಾದ ಪ್ರಕರಣಗಳಿಗೆ ಸಂಬಂಧಪಟ್ಟ ರಾಷ್ಟ್ರೀಯ ದತ್ತಾಂಶ ಭಂಡಾರವಾಗಿದೆ. ಈ ಪೋರ್ಟಲ್ ಅನ್ನು ಪ್ರಕರಣಗಳನ್ನು ಪರಿಣಾಮಕಾರಿಯಾಗಿ ವಿಲೇ ಮಾಡಲು ಮುಂದಾಗಿರುವ ಪ್ರಕರಣಗಳನ್ನು ದಕ್ಷವಾಗಿ ಪ್ರಕರಣಗಳನ್ನು ನಿರ್ವಹಣೆ ಮಾಡುವ ಹಾಗೂ ಮೇಲ್ವಿಚಾರಣೆಯನ್ನು ಮಾಡುವ ಸ್ಥಿತಿಸ್ಥಾಪಕ ಶೋಧನಾ ತಾಂತ್ರಿಕ ಪರಿಕಲ್ಪನೆಯಲ್ಲಿ ಅಭಿವೃದ್ಧಿಪಡಿಸಲಾಗಿದೆ.

    ಪೋರ್ಟಲ್‍ಗೆ ಅಪ್ ಲೋಡ್ ಮಾಡಲಾದ ಹಾಗೂ ಮುದ್ರಣ ಸಂಯೋಜನೆ ಮಾಡಲಾದ ದತ್ತಾಂಶವನ್ನು ನೋಡಬಹುದಾಗಿದೆ ಹಾಗೂ ವಿಶ್ಲೇಷಣೆ ಮಾಡಬಹುದಾಗಿದೆ.
    • ಪ್ರವರ್ಗವಾರು
    • ವರ್ಷವಾರು
    • ರಾಜ್ಯವಾರು
    • ಸಂಸ್ಥೆಗಳಲ್ಲೆಡೆ ಪ್ರಕರಣಗಳ ಮಾಸಿಕವಾರು ವಿಲೇವಾರಿ
    • ವ್ಯಾಜ್ಯದ ಎಲ್ಲಾ ಮೂಲ/ಅಪೀಲು/ ನಿರ್ವಹಣಾ ಹಂತಗಳು
    • ವಿಳಂಬಕ್ಕಾಗಿ ಕಾರಣಗಳು
    ಎನ್‍ಜೆಡಿಜಿಯು ದೇಶಾದ್ಯಾಂತ ಇರುವ ಎಲ್ಲಾ ನ್ಯಾಯಾಲಯಗಳಲ್ಲಿ ಹೂಡಲಾದ ವಿಲೆ ಮಾಡಲಾದ ಹಾಗೂ ಇತ್ಯರ್ಥದಲ್ಲಿರುವ ಪ್ರಕರಣಗಳ ಸಂಚಿತ ಅಂಕಿ ಅಂಶಗಳನ್ನು ಒದಗಿಸುತ್ತದೆ. ಈ ಅಂಕಿ ಅಂಶಗಳನ್ನು ಆಯಾಯ ನ್ಯಾಯಾಲಯವು ಪ್ರತಿ ದಿನ ನವೀಕರಿಸಲಾಗುತ್ತದೆ. ಸಂದರ್ಶಕರು ನಿರ್ದಿಷ್ಟ ಪ್ರಕರಣಗಳಿಗೆ ಮಾಹಿತಿಯನ್ನು ಪಡೆಯಬಹುದಾಗಿದೆ. ಜಾಲತಾಣವು, ಸಲ್ಲಿಸಿದ ಪ್ರಕರಣಗಳ ಸಂಖ್ಯೆ ಹಾಗೂ ಬಾಕಿಯಿರುವ ಪ್ರಕರಣಗಳ ಸಂಖ್ಯೆಯನ್ನು ತೋರಿಸುತ್ತದೆ. ಸಿವಿಲ್ ಹಾಗೂ ಕ್ರಿಮಿನಲ್ ಅಧಿಕಾರ ವ್ಯಾಪ್ತಿಯಲ್ಲಿ ವಿಭಾಗಿಸಲಾದ ಇತ್ಯರ್ಥದಲ್ಲಿರುವ ಪ್ರಕರಣಗಳನ್ನು 5 ರಿಂದ 10 ವರ್ಷ ಹಳೆಯ ಪ್ರಕರಣಗಳು ಮೊದಲಾದವುಗಳ ನಡುವಿನ ಹತ್ತು ವರ್ಷ ಹಳೆಯ ಪ್ರಕರಣಗಳಂಥ ವಯೋವಾರು ಪ್ರವರ್ಗಗಳನ್ನು ಇನ್ನೂ ಪ್ರತ್ಯೇಕಗೊಳಿಸಬಹುದಾಗಿದೆ. ರಾಷ್ಟ್ರೀಯ ರಾಜ್ಯ ಹಾಗೂ ಜಿಲ್ಲಾ ಮಟ್ಟಗಳಲ್ಲಿ ಬಾಕಿಯಿರುವ ಪ್ರಕರಣಗಳ ದತ್ತಾಂಶವು ಮುಕ್ತವಾಗಿರುತ್ತದೆ ಹಾಗೂ ಸಾರ್ವಜನಿಕ ಉಪಯೋಗಕ್ಕೆ ಬರುತ್ತವೆ.