Close

    ಪರಿಚಯ

    ಪರಿಚಯ

    ನ್ಯಾಯಾಲಯಗಳಲ್ಲಿ ಐಟಿಸಿಯನ್ನು ಅನುಷ್ಠಾನಗೊಳಿಸಲು ಹೊಸ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುವ ಮೂಲಕ ನ್ಯಾಯಿಕ ವಲಯವನ್ನು ಸುಧಾರಿಸುವ ಮತ್ತು ರಾಷ್ಟ್ರೀಯ ಕಾರ್ಯನೀತಿ ಮತ್ತು ಕ್ರಿಯಾ ಯೋಜನೆಯನ್ನು ರೂಪಿಸುವ ಅತ್ಯಗತ್ಯತೆಯನ್ನು ಮನಗಂಡು ಅಂದಿನ ಭಾರತದ ಮುಖ್ಯ ನ್ಯಾಯಮೂರ್ತಿಗಳಾದ ಮಾನ್ಯ ನ್ಯಾಯಮೂರ್ತಿ ಆರ್.ಸಿ. ಲಹೋಟಿಯವರು ಇ-ಸಮಿತಿಯನ್ನು ರಚಿಸುವ ಬಗ್ಗೆ ಪ್ರಸ್ತಾಪಿಸಿದ್ದರು. ಭಾರತೀಯ ನ್ಯಾಯಿಕ ವ್ಯವಸ್ಥೆಯು ಡಿಜಿಟಲ್ ಯುಗಕ್ಕೆ ಒಗ್ಗಿಕೊಳ್ಳಲು ಸ್ವಯಂ ಸಿದ್ದಗೊಳ್ಳಲು ಮತ್ತು ನ್ಯಾಯಿಕ ವಿತರಣಾ ವ್ಯವಸ್ಥೆಯನ್ನು ಹೆಚ್ಚು ಸಮರ್ಥಗೊಳಿಸುವ ತಂತ್ರಜ್ಞಾನಗಳು ಮತ್ತು ಸಂವಹನ ಸಾಧನಗಳನ್ನು ಅಳವಡಿಸಿಕೊಂಡು ಅವುಗಳನ್ನು ಅನ್ವಯಿಸಿಕೊಳ್ಳಲು ರಾಷ್ಟ್ರೀಯ ಕಾರ್ಯನೀತಿಯನ್ನು ರೂಪಿಸುವಲ್ಲಿ ಇ-ಸಮಿತಿಗೆ ನೆರವು ನೀಡಬೇಕಾಗಿತ್ತು.

    ಇ-ಸಮಿತಿಯು ಸೃಜಿಸುವ ಡಿಜಿಟಲ್ ವೇದಿಕೆಗಳಿಂದ ನೈಜ ಅವಧಿಯಲ್ಲಿ ಹಿತಾಸಕ್ತಿದಾರರು, ಕಕ್ಷಿದಾರರು, ವಕೀಲರು, ಸರ್ಕಾರಿ/ಕಾನೂನು ಅಮಲ್ಜಾರಿ ಏಜೆನ್ಸಿಗಳು ಮತ್ತು ಸಾಮಾನ್ಯ ನಾಗರಿಕರಿಗೆ ನ್ಯಾಯಿಕ ದತ್ತಾಂಶ ಮತ್ತು ಮಾಹಿತಿಯನ್ನು ಪಡೆಯಲು ಸಾಧ್ಯವಾಗುತ್ತದೆ. ಡಿಜಿಟಲ್ ವೇದಿಕೆಗಳು ಮತ್ತು ಸಂವಾದಾತ್ಮಕ ವೇದಿಕೆಗಳು ಈ ಮುಂದಿನ ಪ್ರಕ್ರಿಯೆಗಳನ್ನು ಸಾಧ್ಯವಾಗಿಸುತ್ತವೆ.
    • ದೇಶದ ಯಾವುದೇ ನ್ಯಾಯಾಲಯದಲ್ಲಿ ಬಾಕಿ ಇರುವ ನಿರ್ಧಿಷ್ಟ ಪ್ರಕರಣದ ಸ್ಥಿತಿ ಮತ್ತು ವಿವರಗಳನ್ನು ಪತ್ತೆ ಹಚ್ಚುವುದು.
    • ದೇಶಾದ್ಯಂತ ವಿವಿಧ ನ್ಯಾಯಾಂಗ ಸಂಸ್ಥೆಗಳಲ್ಲಿ ಬಾಕಿ ಇರುವ ವಿಷಯಗಳ ನಿರ್ವಹಣೆ.
    • ಪ್ರಕರಣಗಳ ತ್ವರಿತಗತಿಯ (ಪಾಸ್ಟ್ ಟ್ರ್ಯಾಕ್) ವರ್ಗಗಳಿಗೆ ಡೇಟಾಬೇಸ್ ಅನ್ನು ಆಯ್ಧು ಹೊರತೆಗೆಯುವುದು ಮತ್ತು ಬಳಸುವುದು.
    • ನ್ಯಾಯಾಲಯದ ಸಂಪನ್ಮೂಲಗಳ ಸಮರ್ಥ ಬಳಕೆ.
    • ನ್ಯಾಯಾಂಗದ ಸಕ್ಷಮತೆ ಮತ್ತು ಪರಿಣಾಮಕಾರಿತ್ವವನ್ನು ಮೇಲ್ಛಿಚಾರಣೆ ಮಾಡಲು ಮತ್ತು ರೂಪಿಸಲು ಡೇಟಾದ ವಿಶ್ಲೇಷಣೆ.