Close

    ಧ್ಯೇಯ/ಉದ್ದೇಶಗಳು

    ಗುರಿ ಮತ್ತು ಧ್ಯೇಯೋದ್ದೇಶಗಳು

    ಮೂಲತತ್ವಗಳುಃ

    ತಂತ್ರಜ್ಞಾನವನ್ನು “ಸದೃಡಗೊಳಿಸಲು” ಮತ್ತು “ಸಶಕ್ತಗೊಳಿಸಲು” ಬಳಸಬೇಕು.

    • ತಂತ್ರಜ್ಞಾನವು ಕೇವಲ ಸಾಂಪ್ರದಾಯಿಕ ಅಭ್ಯಾಸಗಳು ಮತ್ತು ಪ್ರಕ್ರಿಯೆಗಳ ಯಾಂತ್ರೀಕರಣದ ಬಗ್ಗೆ ಮಾತ್ರ ಇರದೆ, ಪರಿವರ್ತನೆಗೆ ವಾಹಕವಾಗಿರಬೇಕು. ಆ ಪರಿವರ್ತನಾ ಶಕ್ತಿಯು ಎಲ್ಲಾ ನಾಗರಿಕರನ್ನು “ಸಬಲರನ್ನಾಗಿ” ಮತ್ತು “ಸಶಕ್ತರನ್ನಾಗಿ” ಮಾಡುತ್ತದೆ.
    • ಎಲ್ಲರಿಗೂ ನ್ಯಾಯ ದೊರೆಯುವಂತೆ ಖಚಿತಪಡಿಸುವುದು.
    • ಯಾವುದೇ ಡಿಜಿಟಲ್ ಡಿವೈಡ್ ಅಥವಾ ಇತರ ಸಾಮಾಜಿಕ-ಆರ್ಥಿಕ ಸವಾಲುಗಳಿಂದ ಪ್ರಭಾವಿತವಾಗದ ಪರಿಹಾರ ಮತ್ತು ಕುಂದುಕೊರತೆ ನಿವಾರಣೆಗಳಿಗಾಗಿ ನ್ಯಾಯಾಂಗ ಸಂಸ್ಥೆಯನ್ನು ಸಂಪರ್ಕಿಸುವ ವಿಧಾನಗಳನ್ನು ಪ್ರತಿಯೊಬ್ಬ ವ್ಯಕ್ತಿಗೆ ಒದಗಿಸಬೇಕು.
    • ಸಮರ್ಥ ಮತ್ತು ಸ್ಪಂದನಾಶೀಲ ನ್ಯಾಯಿಕ ವ್ಯವಸ್ಥೆಯನ್ನು ಸೃಜಿಸುವುದು.
    • ನ್ಯಾಯಾಂಗ ವ್ಯವಸ್ಥೆಯನ್ನು ಶಕ್ತಗೊಳಿಸುವ ತಂತ್ರಜ್ಞಾನದ ಬಳಕೆಯಿಂದ ತ್ವರಿತ ನ್ಯಾಯವನ್ನು ಒದಗಿಸಲು ಮಾತ್ರವಲ್ಲದೆ ನ್ಯಾಯಾಂಗದ ಸಕ್ಷಮತೆ ಮತ್ತು ಪರಿಣಾಮಕಾರಿತ್ವವನ್ನು ಮೇಲ್ವಿಚಾರಣೆ ಮಾಡಲು ಮತ್ತು ಯೋಜಿಸಲು “ಸಮರ್ಥ” ವ್ಯವಸ್ಥೆಯನ್ನು ರೂಪಿಸಲು ಸಾಧ್ಯವಾಗುತ್ತದೆ.

    ಉದ್ದೇಶಗಳುಃ

    ಇ-ಸಮಿತಿಯನ್ನು ಈ ಉದ್ದೇಶಗಳಿಂದ ರೂಪಿಸಲಾಗಿದೆ.
    • ದೇಶಾದ್ಯಂತ ಇರುವ ಎಲ್ಲಾ ನ್ಯಾಯಾಲಯಗಳ ಮಧ್ಯೆ ಅಂತರ್ ಸಂಪರ್ಕ ಕಲ್ಪಿಸುವುದು.
    • ಭಾರತೀಯ ನ್ಯಾಯಾಂಗ ವ್ಯವಸ್ಥೆಯ ಐಸಿಟಿ ಸಕ್ರಿಯೀಕರಣ.
    • ನ್ಯಾಯಾಂಗದ ಉಪಯುಕ್ತತೆಯನ್ನು ಹೆಚ್ಚಿಸಲು ನ್ಯಾಯಾಲಯಗಳನ್ನು ಗುಣಾತ್ಮಕವಾಗಿ ಮತ್ತು ಪರಿಮಾಣಾತ್ಮಕವಾಗಿ ಶಕ್ತಗೊಳಿಸುವುದು.
    • ನ್ಯಾಯ ವಿತರಣಾ ವ್ಯವಸ್ಥೆಯನ್ನು ಸುಲಭವಾಗಿ ಪಡೆಯಲು, ಮಿತವ್ಯಯಕಾರಿಯಾಗಿ ಹಾಗೂ ಪಾರದರ್ಶಕ ಮತ್ತು ಜವಾಬ್ದಾರಿಯುತವಾಗಿಸಲು.

    ಹಂತ-II ಉದ್ದೇಶಗಳುಃ

    • ಕಿಯೋಸ್ಕ್, ವೆಬ್ ಪೋರ್ಟಲ್, ಮೊಬೈಲ್ ಅಪ್ಲಿಕೇಶನ್, ಇ-ಮೇಲ್, ಎಸ್.ಎಂ.ಎಸ್. ಫುಲ್, ಎಸ್.ಎಂ.ಎಸ್. ಪುಷ್‍ಗಳಂತಹ ವಿವಿಧ ಸೇವಾ ವಿತರಣಾ ಚಾನೆಲ್‍ಗಳ ಮೂಲಕ ಕಕ್ಷಿದಾರರಿಗೆ ಮೊಕದ್ದಮೆಯ ಮಾಹಿತಿಯನ್ನು ಸುಲಭವಾಗಿ ಪ್ರಸಾರ ಮಾಡುವುದು.
    • ವಕೀಲರಿಗೆ ಮೊಕದ್ದಮೆಗಳ ಯೋಜನೆ ಮತ್ತು ವೇಳಾಪಟ್ಟಿಯನ್ನು ನೀಡುವುದು.
    • ಮೊಕದ್ದಮೆಗಳನ್ನು ಲೋಡ್ ಮಾಡುವ ನಿರ್ವಹಣೆಯೊಂದಿಗೆ ನ್ಯಾಯಿಕ ಅಧಿಕಾರಿಗಳ ಮೊಕದ್ದಮೆಗಳ ನಿರ್ವಹಣೆ.
    • ಪ್ರಧಾನ ಮತ್ತು ಇತರ ಜಿಲ್ಲಾ ನ್ಯಾಯಾಧೀಶರು ಮತ್ತು ಉಚ್ಛ ನ್ಯಾಯಾಲಯ ನ್ಯಾಯಾಧೀಶರಿಗೆ ಉಸ್ತುವಾರಿ ಮತ್ತು ಮೇಲ್ವಿಚಾರಣಾ ಸೌಲಭ್ಯಗಳು.
    • ಉಚ್ಛ ನ್ಯಾಯಾಲಯಗಳು, ನ್ಯಾಯಾಂಗ ಇಲಾಖೆ, ಸಂಶೋಧಕರು ಮತ್ತು ಅಕಾಡೆಮಿಕ್‍ಗಳ ಮೂಲಕ ಪ್ರತಿಯೊಂದು ಜಿಲ್ಲಾ ಮತ್ತು ತಾಲ್ಲೂಕಿನಲ್ಲಿ ಮೊಕದ್ದಮೆಗಳ ರಾಜ್ಯವಾರು ಉಸ್ತುವಾರಿ ಮತ್ತು ಮೇಲ್ವಿಚಾರಣೆ.
    • ನ್ಯಾಯ ವಿತರಣಾ ವ್ಯವಸ್ಥೆಯ ವ್ಯವಸ್ಥಿತ ಸುಧಾರಣೆಗಾಗಿ ಯೋಜನೆಗಳ ಸೂತ್ರೀಕರಣ.