Close

    ವೆಬ್‍ಸೈಟ್ ಕಾರ್ಯನೀತಿಗಳು

    ಜಾಲತಾಣ ನೀತಿಗಳು

    ಬಳಕೆ ನಿಬಂಧನೆ
    ಇ-ಸಮಿತಿಯು, ಭಾರತದ ಸರ್ವೋಚ್ಛ ನ್ಯಾಯಾಲಯದ ಜಾಲತಾಣದ ವಿಷಯವನ್ನು ನಿರ್ವಹಿಸುತ್ತಿದೆ.

    ಈ ಜಾಲತಾಣದÀಲ್ಲಿನ ವಿಷಯದ ನಿಖರತೆ ಮತ್ತು ಪ್ರಸ್ತುತೆಯನ್ನು ಖಚಿತಪಡಿಸಿಕೊಳ್ಳಲು ಎಲ್ಲಾ ಪ್ರಯತ್ನಗಳನ್ನು ಮಾಡಲಾಗಿದ್ದರೂ, ಅದನ್ನು ಕಾನೂನಿನ ಹೇಳಿಕೆಯಾಗಿ ಅನ್ವಯಿಸಬಾರದು ಅಥವಾ ಯಾವುದೇ ಕಾನೂನು ಉದ್ದೇಶಗಳಿಗಾಗಿ ಬಳಸಬಾರದು.

    ಯಾವುದೇ ಸಂದರ್ಭದಲ್ಲೂ ಇ-ಸಮಿತಿಯಾಗಲಿ ಅಥವಾ ಸರ್ವೋಚ್ಛ ನ್ಯಾಯಾಲಯವಾಗಲಿ ಮಿತಿಯಿಲ್ಲದೆ, ಪರೋಕ್ಷವಾಗಿ ಅಥವಾ ತತ್ಪರಿಣಾಮವಾದ ನಷ್ಟ ಅಥವಾ ಹಾನಿ ಅಥವಾ ಯಾವುದೇ ಖರ್ಚು, ನಷ್ಟ ಅಥವಾ ಹಾನಿ ಅಥವಾ ಈ ಪೋರ್ಟಲ್ ಬಳಕೆಯಿಂದ ಅಥವಾ ಅದಕ್ಕೆ ಸಂಬಂಧಿಸಿದಂತೆ ಉದ್ಭವಿಸುವ ದತ್ತಾಂಶದ ಬಳಕೆಯಿಂದ ಉಂಟಾಗುವ ಯಾವುದೇ ನಷ್ಟ ಅಥವಾ ಹಾನಿಗೆ ಹೊಣೆಯಾಗುವುದಿಲ್ಲ.

    ಈ ಪೋರ್ಟಲ್‍ನಲ್ಲಿ ಸೇರಿಸಲಾಗಿರುವ ಇತರ ಜಾಲತಾಣಗಳ ಸಂಪರ್ಕಗಳನ್ನು ಸಾರ್ವಜನಿಕ ಅನುಕೂಲಕ್ಕಾಗಿ ಮಾತ್ರ ಒದಗಿಸಲಾಗಿದೆ. ಹಾಗೆ ಸಂಪರ್ಕಿಸಲಾದ ಪುಟಗಳ ಲಭ್ಯತೆಯನ್ನು ನಾವು ಎಲ್ಲಾ ಸಮಯದಲ್ಲೂ ಖಾತರಿಪಡಿಸಲಾಗುವುದಿಲ್ಲ.

    ಈ ನಿಬಂಧನೆಗಳು ಮತ್ತು ಷರತ್ತುಗಳನ್ನು, ಭಾರತೀಯ ಕಾನೂನುಗಳಿಗೆ ಅನುಗುಣವಾಗಿ ನಿಯಂತ್ರಿಸಲಾಗುತ್ತದೆ ಮತ್ತು ಅನ್ವಯಿಸಲಾಗುತ್ತದೆ. ಈ ನಿಬಂಧನೆಗಳು ಮತ್ತು ಷರತ್ತುಗಳ ಅಡಿಯಲ್ಲಿ ಉದ್ಭವಿಸುವ ಯಾವುದೇ ವಿವಾದವು, ಭಾರತದ ನ್ಯಾಯಾಲಯಗಳ ವಿಶೇಷ ನ್ಯಾಯವ್ಯಾಪ್ತಿಗೆ ಒಳಪಡುತ್ತವೆ.

    ಕೃತಿಸ್ವಾಮ್ಯ ನೀತಿ

    ಈ ಜಾಲತಾಣದಲ್ಲಿ ತೋರಿಸಿದ ವಿಷಯವನ್ನು ನಮಗೆ ಇ-ಮೇಲ್ ಕಳುಹಿಸುವ ಮೂಲಕ ಸೂಕ್ತ ಅನುಮತಿ ಪಡೆದ ನಂತರ ಉಚಿತವಾಗಿ ಮರು-ರೂಪಿಸಿಕೊಳ್ಳಬಹುದು. ಆದಾಗ್ಯೂ ವಿಷಯವನ್ನು ನಿಖರವಾಗಿ ಮರು-ರೂಪಿಸಿಬೇಕು ಮತ್ತು ಅನುಚಿತ ರೀತಿಯಲ್ಲಿ ಅಥವಾ ದಾರಿತಪ್ಪಿಸುವ ಹಾಗೆ ಬಳಸಬಾರದು. ವಿಷಯವನ್ನು ಪ್ರಕಟಿಸಿದಾಗಲೆಲ್ಲಾ ಅಥವಾ ಇತರರಿಗೆ ವಿತರಿಸಿದಾಗಲÉಲ್ಲಾ ಮೂಲಕ್ಕೆ ಪ್ರಮುಖವಾಗಿ ಮಾನ್ಯತೆ ನೀಡಬೇಕು. ಆದಾಗ್ಯೂ, ಈ ವಿಷಯವನ್ನು ಮರು-ರೂಪಿಸುವ ಅನುಮತಿಯನ್ನು ಮೂರನೇ ಪಕ್ಷದ ಹಕ್ಕುಸ್ವಾಮ್ಯ ಕೃತಿಸ್ವಾಮ್ಯವಾಗಿದೆ ಎಂಬಂತೆ ಗುರುತಿಸಲಾದ ಯಾವುದೇ ವಿಷಯಕ್ಕೆ ವಿಸ್ತರಿಸುವುದಿಲ್ಲ. ಸಂಬಂಧಪಟ್ಟ ಇಲಾಖೆಗಳು/ಕೃತಿಸ್ವಾಮ್ಯ ಹೊಂದಿರುವವರಿಂದ ಅಂತಹ ವಿಷಯಗಳನ್ನು ಮರುರೂಪಿಸುವ ಅಧಿಕಾರವನ್ನು ಪಡೆಯಬೇಕು.

    ಗೌಪ್ಯತೆ ನೀತಿ

    ಈ ಜಾಲತಾಣವು ನಿಮ್ಮಿಂದ ಯಾವುದೇ ನಿರ್ದಿಷ್ಟ ವೈಯುಕ್ತಿಕ ಮಾಹಿತಿಯನ್ನು ಸ್ವಯಂಚಾಲಿತವಾಗಿ ಪಡೆದುಕೊಳ್ಳುವುದಿಲ್ಲ, (ಹೆಸರು, ದೂರವಾಣಿ/ಮೊಬೈಲ್ ಸಂಖ್ಯೆ ಅಥವಾ ಇ-ಮೇಲ್ ವಿಳಾಸದಂತಹ), ಅದು ನಿಮ್ಮನ್ನು ಪ್ರತ್ಯೇಕವಾಗಿ ಗುರುತಿಸಲು ನಮಗೆ ಅನುವು ಮಾಡಿಕೊಡುತ್ತದೆ.

    ವೈಯಕ್ತಿಕ ಮಾಹಿತಿಯನ್ನು ಒದಗಿಸಲು ಜಾಲತಾಣ ನಿಮ್ಮನ್ನು ವಿನಂತಿಸಿದರೆ, ಮಾಹಿತಿಯನ್ನು ಸಂಗ್ರಹಿಸುವ ನಿರ್ದಿಷ್ಟ ಉದ್ದೇಶಗಳನ್ನು ನಿಮಗೆ ತಿಳಿಸಲಾಗುವುದು ಉದಾಃ- ಪ್ರತಿಕ್ರಿಯೆ ಪಡೆದುಕೊಳ್ಳುವುದು ಮತ್ತು ನಿಮ್ಮ ವೈಯಕ್ತಿಕ ಮಾಹಿತಿಯನ್ನು ಸಂರಕ್ಷಿಸಲು ಹೆಚ್ಚಿನ ಭದ್ರತಾ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು.

    ಜಾಲತಾಣದಲ್ಲಿ ಸ್ವಯಂಪ್ರೇರಿತರಾಗಿರುವ ಯಾವುದೇ ವೈಯಕ್ತಿಕವಾಗಿ ಗುರುತಿಸಬಹುದಾದ ಮಾಹಿತಿಯನ್ನು ನಾವು ಯಾರೇ ಮೂರನೇ ಪಕ್ಷಕಾರನಿಗೆ (ಸಾರ್ವಜನಿಕ/ಖಾಸಗಿ) ಮಾರಾಟ ಮಾಡುವುದಿಲ್ಲ ಅಥವಾ ಹಂಚಿಕೊಳ್ಳುವುದಿಲ್ಲ. ಈ ಜಾಲತಾಣಕ್ಕೆ ಒದಗಿಸಲಾಗುವ ಯಾವುದೇ ಮಾಹಿತಿಯನ್ನು ನಷ್ಟ, ದುರುಪಯೋಗ, ಅನಧಿಕೃತ ಪ್ರವೇಶ ಅಥವಾ ಬಹಿರಂಗಪಡಿಸುವಿಕೆ, ಬದಲಾವಣೆ ಅಥವಾ ನಾಶಪಡಿಸುವುದರಿಂದ ಸಂರಕ್ಷಿಸಲಾಗುವುದು.

    ಅಂತರ್ಜಾಲ ಪ್ರೋಟೋಕಾಲ್ (ಐ.ಪಿ.) ವಿಳಾಸ, ಕ್ಷೇತ್ರದ ಹೆಸರು, ಪರಿಶೀಲಿಸುವ (ಬ್ರೌಸ್ ಮಾಡುವ) ವಿಧಾನ, ನಿರ್ವಹಣಾ ವ್ಯವಸ್ಥೆ, ಭೇಟಿ ನೀಡಿದ ದಿನಾಂಕ ಮತ್ತು ಸಮಯ ಹಾಗೂ ಭೇಟಿ ನೀಡಿದ ಪುಟಗಳಂಥ ಬಳಕೆದಾರರ ಬಗೆಗಿನ ಕೆಲವು ಮಾಹಿತಿಯನ್ನು ನಾವು ಸಂಗ್ರಹಿಸುತ್ತೇವೆ. ಜಾಲತಾಣವನ್ನು ಹಾನಿಗೊಳಿಸುವ ಪ್ರಯತ್ನವನ್ನು ಪತ್ತೆ ಹಚ್ಚದÀ ಹೊರತು, ನಮ್ಮ ಜಾಲತಾಣಕ್ಕೆ ಭೇಟಿ ನೀಡುವ ವ್ಯಕ್ತಿಗಳ ಗುರುತಿನೊಂದಿಗೆ ಈ ವಿಳಾಸಗಳನ್ನು ಸಂಪರ್ಕಿಸಲು ನಾವು ಪ್ರಯತ್ನಿಸುವುದಿಲ್ಲ.

    ಹೈಪರ್ ಸಂಪರ್ಕ ನೀತಿ

    ಬಾಹ್ಯ ಜಾಲತಾಣಗಳು/ಪೋರ್ಟಲ್‍ಗಳಿಗೆ ಸಂಪರ್ಕಗಳು
    ಈ ಜಾಲತಾಣದ ಅನೇಕ ಸ್ಥಳಗಳಲ್ಲಿ, ನೀವು ಇತರ ಜಾಲತಾಣಗಳಿಗೆ/ಪೋರ್ಟಲ್‍ಗಳಿಗೆ ಸಂಪರ್ಕಗಳನ್ನು ಕಾಣಬಹುದು. ನಿಮ್ಮ ಅನುಕೂಲಕ್ಕಾಗಿ ಈ ಸಂಪರ್ಕಗಳನ್ನು ಇರಿಸಲಾಗಿದೆ. ಈ ಸಂಪರ್ಕಗಳು ಎಲ್ಲಾ ಸಮಯದಲ್ಲೂ ಕಾರ್ಯ ನಿರ್ವಹಿಸುತ್ತವೆ ಎಂಬುದನ್ನು ನಾವು ಖಾತರಿಪಡಿಸಲಾಗುವುದಿಲ್ಲ ಮತ್ತು ಸಂಪರ್ಕಿಸಲಾದ ಪುಟಗಳ ಲಭ್ಯತೆಯ ಮೇಲೆ ನಾವು ಯಾವುದೇ ನಿಯಂತ್ರಣ ಹೊಂದಿರುವುದಿಲ್ಲ.

    ಆರ್ಕೈವಲ್ ನೀತಿ

    ರಾಜ್ಯ ಸಂಸ್ಥೆ ಜಾಲತಾಣದಲ್ಲಿ ಪ್ರಕಟವಾದ ರಾಜ್ಯ ಸಂಸ್ಥೆಯ ನಿರ್ದಿಷ್ಟ ವಿಷಯಾಂಶವು ಸಾಮಾನ್ಯ ಸ್ವರೂಪದ್ದಾಗಿದ್ದು, ಯಾವುದೇ ನಿರ್ದಿಷ್ಟ ಕಾಲಾವಧಿಯನ್ನು ಹೊಂದಿಲ್ಲ (ತೊರೆಯುವ ಸಮಯ). ಆದ್ದರಿಂದ, ಯಾವಾಗಲೂ ಇರುತ್ತದೆ ಮತ್ತು ಜಾಲತಾಣದ ಮೂಲಕ ಪ್ರವೇಶಿಸಬಹುದು. ಆದಾಗ್ಯೂ, ವಿಷಯಾಂಶವು ವಿಭಾಗಗಳ ಅಡಿಯಲ್ಲಿ ಪ್ರಕಟಿಸಲಾದ ಘಟನೆಗಳು, ಟೆಂಡರ್‍ಗಳು, ನೇಮಕಾತಿ ಮತ್ತು ಪ್ರಕಟಣೆಗಳಂಥ ಕಾಲಮಿತಿಯನ್ನು ಹೊಂದಿವೆ ಮತ್ತು ಗೊತ್ತುಪಡಿಸಿದ ದಿನಾಂಕದ ನಂತರ (ಪ್ರತಿ ವಿಷಯಾಂಶದ ಜೊತೆಗೆ ಪ್ರದರ್ಶಿಸಲಾಗುತ್ತದೆ) ಆನ್‍ಲೈನ್ ಆರ್ಕೈವಲ್ ವಿಭಾಗಕ್ಕೆ ಸ್ವಯಂಚಾಲಿತವಾಗಿ ವರ್ಗಾವಣೆಯಾಗುತ್ತದೆ.