Close

    ಗೌರವಾನ್ವಿತ ನ್ಯಾಯಮೂರ್ತಿ ಡಾ. ಧನಂಜಯ ವೈ ಚಂದ್ರಚೂಡ್, ಭಾರತದ ಮುಖ್ಯ ನ್ಯಾಯಮೂರ್ತಿಗಳು

    2020082939-ouochc3vg48n67zh41untu8p6n80fjw176qvd94ykw
    • ಪದನಾಮ: ಪ್ರಧಾನ ಮಹಾ ಪೋಷಕರು ಮತ್ತು ಅಧ್ಯಕ್ಷರು

    ಶ್ರೀಯುತರು ನವದೆಹಲಿಯ ಸಂತ ಸ್ಟೀಫನ್ಸ್ ಕಾಲೇಜಿನಿಂದ ಅರ್ಥಶಾಸ್ತ್ರದಲ್ಲಿ ಬಿ.ಎ. ಹಾನರ್ಸ ಪದವಿ , ದೆಹಲಿ ವಿಶ್ವವಿದ್ಯಾಲಯದ ಕ್ಯಾಂಪಸ್ ಲಾ ಸೆಂಟರ್‌ನಿಂದ ಎಲ್‌ಎಲ್‌ಬಿ ಪದವಿ ಮತ್ತು ಯು.ಎಸ್‌.ಎ. ನ ಹಾರ್ವರ್ಡ್ ಲಾ ಸ್ಕೂಲ್‌ನಿಂದ ಎಲ್‌ಎಲ್‌ಎಂ ಮತ್ತು ಎಸ್‌ಜೆಡಿ ಪದವಿ ಪಡೆದಿರುತ್ತಾರೆ.

    ಮಹಾರಾಷ್ಟ್ರದ ಬಾರ್ ಕೌನ್ಸಿಲ್‌ ನಲ್ಲಿ ನೋಂದಾಯಿತರಾದ ಇವರು ಪ್ರಧಾನವಾಗಿ ಬಾಂಬೆ ಹೈಕೋರ್ಟ್ ಮತ್ತು ಭಾರತದ ಸರ್ವೋಚ್ಚ ನ್ಯಾಯಾಲಯದಲ್ಲಿ ವಕೀಲ ವೃತ್ತಿಯಲ್ಲಿ ತೊಡಗಿಸಿಕೊಂಡರು. 1998 ರಲ್ಲಿ ಭಾರತದ ಸಿನೀಯರ್ ಅಡ್ವೊಕೇಟ್ ಆಗಿ ಮತ್ತು ಹೆಚ್ಚುವರಿ ಸಾಲಿಸಿಟರ್ ಜನರಲ್ ಆಗಿ ನೇಮಕಗೊಂಡರು.

    ಮುಂಬೈ ವಿಶ್ವವಿದ್ಯಾಲಯದಲ್ಲಿ ತುಲನಾತ್ಮಕ ಸಾಂವಿಧಾನಿಕ ಕಾನೂನು ವಿಷಯದಲ್ಲಿ ಸಂದರ್ಶಕ ಪ್ರಾಧ್ಯಾಪಕರಾಗಿದ್ದರು. ಯು.ಎಸ್.ಎ. ನ ಒಕ್ಲಹೋಮ ಯೂನಿವರ್ಸಿಟಿಯ ಸ್ಕೂಲ್ ಆಫ್ ಲಾ ನಲ್ಲಿ ಸಹ ಸಂದರ್ಶಕ ಪ್ರಾಧ್ಯಾಪಕರಾಗಿದ್ದರು.

    ಆಸ್ಟ್ರೇಲಿಯನ್ ನ್ಯಾಷನಲ್ ಯೂನಿವರ್ಸಿಟಿ, ಹಾರ್ವರ್ಡ್ ಲಾ ಸ್ಕೂಲ್, ಯೇಲ್ ಲಾ ಸ್ಕೂಲ್ ಮತ್ತು ದಕ್ಷಿಣ ಆಫ್ರಿಕಾದ ವಿಟ್ವಾಟರ್ಸ್ರ್ಯಾಂಡ್ ವಿಶ್ವವಿದ್ಯಾಲಯದಲ್ಲಿ ಉಪನ್ಯಾಸಗಳನ್ನು ನೀಡಿದರು. ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಹೈ ಕಮಿಷನ್, ಅಂತರಾಷ್ಟ್ರೀಯ ಕಾರ್ಮಿಕ ಸಂಸ್ಥೆ, ವಿಶ್ವಸಂಸ್ಥೆಯ ರಾಷ್ಟ್ರೀಯ ಪರಿಸರ ಕಾರ್ಯಕ್ರಮ, ವಿಶ್ವ ಬ್ಯಾಂಕ್ ಮತ್ತು ಏಷ್ಯನ್ ಅಭಿವೃದ್ಧಿ ಬ್ಯಾಂಕ್ ಸೇರಿದಂತೆ ವಿಶ್ವಸಂಸ್ಥೆಯ ಅಂಗ ಸಂಸ್ಥೆಗಳು ಆಯೋಜಿಸಿದ ಸಮ್ಮೇಳನಗಳಲ್ಲಿ ಭಾಷಣ ನೀಡಿರುತ್ತಾರೆ.

    ಮಾರ್ಚ್ 29, 2000 ರಂದು ಬಾಂಬೆ ಹೈಕೋರ್ಟ್‌ನ ಪೀಠಕ್ಕೆ ನ್ಯಾಯಮೂರ್ತಿಯಾಗಿ ನೇಮಕಗೊಂಡರು. ಮಹಾರಾಷ್ಟ್ರ ನ್ಯಾಯಾಂಗ ಅಕಾಡೆಮಿಯ ನಿರ್ದೇಶಕರಾದರು.
    ಅಕ್ಟೋಬರ್ 31, 2013 ರಲ್ಲಿ ಅಲಹಾಬಾದ್ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿ ಪ್ರಮಾಣವಚನ ಸ್ವೀಕರಿಸಿದರು.
    ಮೇ 13, 2016 ರಂದು ಭಾರತದ ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿಯಾಗಿ ನೇಮಕಗೊಂಡರು.
    ನವೆಂಬರ್ 9, 2022 ರಂದು ಭಾರತದ ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಯಾಗಿ ಪ್ರಮಾಣವಚನ ಸ್ವೀಕರಿಸಿದರು.