Close

    ಸ್ವಯಂ ಚಾಲಿತ ಇ-ಅಂಚೆ

     ಸ್ವಯಂ ಚಾಲಿತ ಇ-ಅಂಚೆ

    ಸಿ.ಐ.ಎಸ್. ತಂತ್ರಾಂಶವನ್ನು (ನಿರಂತರ ಸುಧಾರಣೆ ತಂತ್ರಾಂಶ) ವಕೀಲರಿಗೆ ಮತ್ತು ದಾವೆದಾರರಿಗೆ ಮೊಕದ್ದಮೆಗಳ ವಸ್ತುಸ್ಥಿತಿ, ಮುಂದಿನ ವಿಚಾರಣೆ ದಿನಾಂಕ, ವ್ಯಾಜ್ಯಪಟ್ಟಿ, ತೀರ್ಪು ಮತ್ತು ಆದೇಶಗಳ ವಿವರಗಳನ್ನು ಇ-ಅಂಚೆಯಲ್ಲಿ ಸ್ವಯಂಚಾಲಿತವಾಗಿ ಕಳುಹಿಸುವುದಕ್ಕೆ ಈ ಸಿಐಎಸ್ ತಂತ್ರಾಂಶವನ್ನು ವಿನ್ಯಾಸಗೊಳಿಸಲಾಗಿದೆ. ವ್ಯಾಜ್ಯಪಟ್ಟಿಗಳಿಗಾಗಿ ಮತ್ತು ಮೊಕದ್ದಮೆಯ ವರ್ಗಾವಣೆ ಮತ್ತು ವಿಲೆಯಂತಹ ಪ್ರಮುಖ ಸಂಗತಿಗಳ ಮುಂದಿನ ದಿನಾಂಕಗಳಿಗಾಗಿ ದಿನನಿತ್ಯದ ಸಂದೇಶ ಸೂಚಕಗಳನ್ನು ಸೃಜಿಸುವ ವ್ಯವಸ್ಥೆಯನ್ನು ಸಹ ವಿನ್ಯಾಸಗೊಳಿಸಲಾಗಿದೆ. ಇದು ಪಿ.ಡಿ.ಎಫ್. ನಮೂನೆಯಲ್ಲಿ ಆದೇಶಗಳನ್ನು/ತೀರ್ಪುಗಳನ್ನು ಮೇಲ್ ಮೂಲಕ ಕಳುಹಿಸುವ ಅನುಕೂಲತೆಯನ್ನು ಸಹ ಇದು ಹೊಂದಿದೆ.