Close

    ವಿಚ್ಯುರ್ವಲ್ ನ್ಯಾಯಾಲಯಗಳು

    ವಿಚ್ಯುರ್ವಲ್ ನ್ಯಾಯಾಲಯಗಳು ನ್ಯಾಯಾಲಯದಲ್ಲಿ ಕಕ್ಷಿಗಾರ ಅಥವಾ ವಕೀಲರ ಹಾಜರಿಯನ್ನು ತೆಗೆದುಹಾಕುವ ಗುರಿ ಹೊಂದಿದೆ ಹಾಗೂ ವಿಚ್ಯುರ್ವಲ್ ವೇದಿಕೆಯಲ್ಲಿ ಪ್ರಕರಣಗಳ ನ್ಯಾಯ ನಿರ್ಣಯ ಮಾಡುವ ಪರಿಕಲ್ಪನೆಯಾಗಿದೆ. ನ್ಯಾಯಾಲಯ ಸಂಪನ್ಮೂಲಗಳನ್ನು ದಕ್ಷತೆಯಿಂದ ಬಳಸಿಕೊಳ್ಳುವ ಸಲುವಾಗಿ ಈ ಪರಿಕಲ್ಪನೆಯನ್ನು ರೂಪಿಸಲಾಗಿದೆ ಹಾಗೂ ಸಣ್ಣ-ಪಟ್ಟ ವಿವಾದಗಳನ್ನು ಇತ್ಯರ್ಥಪಡಿಸಲು ಪರಿಣಾಮಕಾರಿ ಮಾರ್ಗದಲ್ಲಿ ವ್ಯಾಜ್ಯಗಳನ್ನು ಒದಗಿಸುತ್ತದೆ. ವಿಚ್ಯುರ್ವಲ್ ನ್ಯಾಯಾಲಯವನ್ನು ವಿಚ್ಯುರ್ವಲ್ ವಿದ್ಯುನ್ಮಾನ ವೇದಿಕೆ ಮೂಲಕ ನ್ಯಾಯಾಧೀಶರು ನಡೆಸಬಹುದಾಗಿದ್ದು, ಇವರ ಅಧಿಕಾರ ವ್ಯಾಪ್ತಿಯನ್ನು ರಾಜ್ಯಾದ್ಯಂತ ವಿಸ್ತರಿಸಬಹುದಾಗಿದ್ದು 24 )( 7 ಕಾರ್ಯನಿರ್ವಹಿಸುತ್ತವೆ. ಕಕ್ಷಿಗಾರನಾಗಲಿ ಅಥವಾ ನ್ಯಾಯಾಧೀಶರಾಗಲಿ ಪರಿಣಾಮಕಾರಿ ನ್ಯಾಯ ನಿರ್ಣಯಕ್ಕೆ ಹಾಗೂ ತೀರ್ಮಾನಕ್ಕಾಗಿ ನ್ಯಾಯಾಲಯಕ್ಕೆ ಖುದ್ದಾಗಿ ಭೇಟಿ ನೀಡಬೇಕಾಗುವುದಿಲ್ಲ. ಸಂವಹನವು ವಿದ್ಯುನ್ಮಾನ ರೂಪದಲ್ಲಿಯೇ ಇರುತ್ತದೆ ಹಾಗೂ ಶಿಕ್ಷೆ ವಿಧಿಸುವಿಕೆ ಹಾಗೂ ಹೆಚ್ಚಿನ ಶುಲ್ಕ ಸಂದಾಯ ಅಥವಾ ನಷ್ಟ ಪರಿಹಾರವು ಆನ್ ಲೈನ್‍ನಲ್ಲೇ ಸೇರಿರುತ್ತದೆ. ಈ ನ್ಯಾಯಾಲಯಗಳನ್ನು

    ಆಪಾದಿತನು ಅಪರಾಧಿಯೆಂದು ಪೂರ್ವಭಾವಿಯಾಗಿ ಒಪ್ಪಿಕೊಳ್ಳಬಹುದಾದಲ್ಲಿ ಅಥವಾ ವಿದ್ಯುನ್ಮಾನ ನಮೂನೆಯಲ್ಲಿ ಸಮನುಗಳನ್ನು ಸ್ವೀಕರಿಸಿದ ನಂತರ ಪ್ರತಿವಾದಿಯು ವ್ಯಾಜ್ಯದ ಪೂರ್ವಭಾವಿ ಅನುಸರಣೆಯಲ್ಲಿರುವಲ್ಲಿ ಪ್ರಕರಣಗಳ ವಿಲೇವಾರಿಗೆ ಬಳಸಿಕೊಳ್ಳಬಹುದಾಗಿದೆ.

    ವಿಚ್ಯುರ್ವಲ್ ನ್ಯಾಯಾಲಯಗಳು ಪರಿಣಾಮಕಾರಿಯಾಗಿ ವಿಲೆ ಮಾಡಬಹುದಾದ ಪ್ರಕರಣಗಳ ವಿಧಗಳನ್ನು ಮೊದಲಿಗೆ ಗುರುತಿಸುವುದು ಅವಶ್ಯಕವಾಗಿರುವುದರಿಂದ, ಪ್ರಸುತ್ತವಾಗಿ ಹಾಗೂ ಮಾರ್ಗದರ್ಶಕ ಯೋಜನೆಯ ಭಾಗವಾಗಿ, ಈ ಮುಂದಿನ ಪ್ರಕರಣಗಳ ಪ್ರವರ್ಗಗಳನ್ನು, ವಿಚ್ಯುರ್ವಲ್ ನ್ಯಾಯಾಲಯಗಳಲ್ಲಿ ಅಧಿವಿಚಾರಣೆ ಮಾಡುವುದು ಕಾರ್ಯಸಾಧ್ಯವೆಂದು ಕಂಡುಬಂದಿರುತ್ತದೆ.
    1. ಮೋಟಾರು ವಾಹನಗಳ ಅಧಿನಿಯಮದ ಮೇರೆಗೆ ಅಪರಾಧಗಳು (ಸಂಚಾರಿ ಚಾಲನಾ ಪ್ರಕರಣಗಳು)
    2. 206ನೇ ಪ್ರಕರಣದ ಅಡಿಯಲ್ಲಿ ಸಮನುಗಳನ್ನು ಹೊರಡಿಸಬಹುದಾದ ಸಣ್ಣಪುಟ್ಟ ಅಪರಾಧಗಳು.

    ಸಂದರ್ಶಿಸಿಃ http://vcourts.gov.in