Close

  ಇ-ಸೇವಾ ಕೇಂದ್ರ

  ಇ-ಸೇವಾ ಕೇಂದ್ರ

  ಪ್ರತಿ ರಾಜ್ಯದ ಉಚ್ಛ ನ್ಯಾಯಾಲಯದಲ್ಲಿ ಮತ್ತು ಒಂದು ಜಿಲ್ಲಾ ನ್ಯಾಯಾಲಯದಲ್ಲಿ ಮಾರ್ಗದರ್ಶಿಕ ನೆಲೆಯಾಗಿ ಈ ಸೇವಾ ಕೇಂದ್ರಗಳನ್ನು ಸೃಜಿಸಲಾಗಿದೆ. ಈ ಸೇವಾ ಕೇಂದ್ರಗಳು ದಾವೆದಾರರಿಗೆ ಮೊಕದ್ದಮೆಯ ವಸ್ತುಸ್ಥಿತಿಗೆ ಸಂಬಂಧಿಸಿದಂತೆ ಮಾಹಿತಿಯನ್ನುಪಡೆಯುವುದಕ್ಕೆ ಮತ್ತು ತೀರ್ಪುಗಳ ಮತ್ತು ಆದೇಶಗಳ ಪ್ರತಿಗಳನ್ನು ಪಡೆಯುವುದಕ್ಕೆ ಅನುವು ಮಾಡಿಕೊಡುತ್ತದೆ. ಈ ಕೇಂದ್ರಗಳ ಮೊಕದ್ದಮೆಗಳ ಇ-ಫೈಲಿಂಗ್ ಮಾಡುವಲ್ಲಿಯೂ ನೆರವನ್ನು ವಿಸ್ತರಿಸಿದೆ. ಈ ಕೇಂದ್ರಗಳು ಸಾಮಾನ್ಯ ನಮುಷ್ಯನಿಗೆ ಮತ್ತು ಅವನು ತನ್ನ ನ್ಯಾಯದ ಹಕ್ಕನ್ನು ಪಡೆಯುವಕ್ಕೆ ಮಹತ್ತರವಾದ ಹೆಜ್ಜೆಯಾಗಿ ರೂಪುಗೊಂಡಿವೆ.

  ಇ-ಸೇವೆ ಕೇಂದ್ರದಲ್ಲಿ ಒದಗಿಸಬೇಕಾದ ಸೌಲಭ್ಯಗಳು

  ಇ-ಸೇವಾ ಕೇಂದ್ರಗಳು ದಾವೆದಾರರಿಗೆ ಮತ್ತು ವಕೀಲರಿಗೆ ಈ ಕೆಳಗಿನ ಸೇವೆಗಳನ್ನು ಪ್ರಾಥಮಿಕವಾಗಿ ಒದಗಿಸತಕ್ಕದ್ದು.
  •ಮುಂದಿನ ಮೊಕದ್ದಮೆಯ ವಸ್ತು ಸ್ಥಿತಿ ಕುರಿತು ವಿಚಾರಣೆಯನ್ನು, ವಿಚಾರಣೆಯ ದಿನಾಂಕ ಮತ್ತು ಇತರ ವಿವರಗಳ ನಿರ್ವಹಣೆ.
  •ಪ್ರಮಾಣೀಕೃತ ಪ್ರತಿಗಳಿಗಾಗಿ ಅಂತರ್ಜಾಲ ಅನ್ವಯಿಕಗಳ ಸೌಲಭ್ಯ.
  •ಮುದ್ರಿತ ಪ್ರತಿ ಅರ್ಜಿಗಳನ್ನು ಸ್ಕ್ಯಾನಿಂಗ್‍ನಿಂದಲೇ ಇ-ಫೈಲಿಂಗ್ ಮಾಡುವ
  ಇ-ಸಹಿಗಳನ್ನು ಸೇರಿಸುವ, ಸಿಐಎಸ್‍ನೊಳಗೆ ಅವನ್ನು ಸೇರಿಸುವ ಮತ್ತು ದಾಖಲಿಸಿದ ಸಂಖ್ಯೆಯನ್ನು ಸೃಜಿಸುವ ಸೌಲಭ್ಯ.
  •ಅಂತರ್ಜಾಲದಲ್ಲಿ ಇ-ಛಾಪಾ ಕಾಗದಗಳನ್ನು ಖರೀದಿಸಲು, ಇ-ಪಾವತಿಗಳನ್ನು ಮಾಡಲು ನೆರವು.
  •ಆಧಾರ್ ಆಧಾರಿತ ಡಿಜಿಟಲ್ ಸಹಿಯನ್ನು ಅಳವಡಿಸಲು ಮತ್ತು ಪಡೆಯಲು ನೆರವು.
  •ಆಂಡ್ರಾಯ್ಡ್ ಮತ್ತು ಐಓಎಸ್‍ಗಳಲ್ಲಿ ಇ-ನ್ಯಾಯಾಲಯಗಳ ಮೊಬೈಲ್ ಅಪ್ಲಿಕೇಶನ್ ಅನ್ನು ಡೌನ್‍ಲೋಡ್ ಮಾಡಿಕೊಳ್ಳಲು ಪ್ರಚಾರ ಮಾಡುವುದು ಮತ್ತು ನೆರವು ನೀಡಿವುದು.
  •ಸೆರೆಮನೆಯಲ್ಲಿ ಸಂಬಂಧಿಕರನ್ನು ಭೇಟಿ ಮಾಡುವುದ್ಕಕಾಗಿ ಸಮಯವನ್ನು
  ಇ-ಮುಲಾಕತ್‍ನಲ್ಲಿ ನಿಗದಿಪಡಿಸಲು ಸೌಲಭ್ಯ.
  •ರಜೆಯಲ್ಲಿರುವ ನ್ಯಾಯಾಧೀಶರುಗಳ ಸಂಬಂಧದಲ್ಲಿ ಪ್ರಶ್ನೆಗಳ ನಿರ್ವಹಣೆ.
  •ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಉಚ್ಛ ನ್ಯಾಯಾಲಯ ಕಾನೂನು ಸೇವಾ ಸಮಿತಿ ಮತ್ತು ಸರ್ವೋಚ್ಛ ನ್ಯಾಯಾಲಯ ಕಾನೂನು ಸೇವಾ ಸಮಿತಿಯಿಂದ ಉಚಿತ ಕಾನೂನು ಸೇವೆಗಳ    ಲಭ್ಯತೆಯ ಸಂಬಂಧದಲ್ಲಿ ಜನರಿಗೆ ಮಾರ್ಗದರ್ಶನ ನೀಡುವುದು.
  •ಭ್ರಮಾತ್ಮಕ ನ್ಯಾಯಾಲಯಗಳಲ್ಲಿ ಸಂಚಾರಿ ನಿಯಮಗಳ ಉಲ್ಲಂಘನೆ ಸಂಬಂಧದಲ್ಲಿ ಟ್ರಾಫಿಕ್ ಚಲನ್‍ಅನ್ನು ವಿಲೇವಾರಿ ಮಾಡಲು ಸೌಲಭ್ಯ ಮತ್ತು ಟ್ರಾಫಿಕ್ ಚಲನ್ ಮತ್ತು ಇತರ ಸಣ್ಣ  ಅಪರಾಧಗಳನ್ನು ಅಂತರ್ಜಾಲದಲ್ಲಿ ಸಂಯೋಜಿಸುವುದು.
  •ನ್ಯಾಯಾಲಯದ ವಿಚಾರಣೆಯನ್ನು ವೀಡಿಯೊ ಕಾನ್ಫರೆನ್ಸ್‍ನಲ್ಲಿ ಮಾರ್ಪಾಡು ಮಾಡುವ ಮತ್ತು ನಿರ್ವಹಿಸುವ ವಿಧಾನವನ್ನು ವಿವರಿಸುವುದು.
  •ನ್ಯಾಯಾಂಗ ಆದೇಶಗಳ/ತೀರ್ಪುಗಳ ವಿದ್ಯುನ್ಮಾನ ಪ್ರತಿಗಳನ್ನು ಇ-ಅಂಚೆ ಅಥವಾ ಲಭ್ಯವಿರುವ ಯಾವುದೇ ಇತರ ವಿಧಾನಗಳ ಮುಖಾಂತರ ಒದಗಿಸುವುದು.