ಎನ್.ಎಸ್.ಟಿ.ಇ.ಪಿ.
ಎನ್‍ಎಸ್‍ಟಿಇಪಿ
ಸಾಂಪ್ರದಾಯಿಕ ವಿಧಾನಗಳ ಮೂಲಕ ಸಮನುಗಳನ್ನು ಹಾಗೂ ಪ್ರಕ್ರಿಯೆಗಳನ್ನು ನಡೆಸುವುದು ಪ್ರಕರಣಗಳ ತ್ವರಿತಗತಿ ವಿಲೇವಾರಿಯಲ್ಲಿ ಆಗಾಗ ಅನಿವಾರ್ಯವಾಗಿ ವಿಳಂಬವಾಗುತ್ತವೆ. ಎನ್‍ಎಸ್‍ಟಿ ಇಪಿಯು, ವೆಬ್ ಅರ್ಜಿಯನ್ನು ಒಳಗೊಂಡಿರುವ ಅರ್ಜಿಯ ಮಾರ್ಗ ಹುಡುಕುವ ಕೇಂದ್ರೀಕೃತ ಪ್ರಕ್ರಿಯಾ ಸೇವೆಯಾಗಿದ್ದು, ಪ್ರಕ್ರಿಯೆಯನ್ನು ಮುಖ್ಯವಾಹಿನಿಗೆ ತರಲು ವಿನ್ಯಾಸಗೊಳಿಸಿದ ಪರಿಪೂರಕ ಮೊಬೈಲ್ ಆ್ಯಪ್. ಅಮೀನರುಗಳು ಹಾಗೂ ಸಮನು ಜವಾನರುಗಳಿಗೆ ಒದಗಿಸಿರುವ ಎನ್‍ಎಸ್‍ಟಿಇಪಿ ಮೊಬೈಲ್ ಆ್ಯಪ್ ಸರಿಯಾದ – ಸಮಯದಲ್ಲಿ ನೋಟೀಸುಗಳನ್ನು ಹಾಗೂ ಸಮನುಗಳನ್ನು ಪತ್ತೆ ಹಚ್ಚಲು ಪಾರದರ್ಶಕ ಮಾರ್ಗವನ್ನು ಅನುವು ಮಾಡಿಕೊಡುತ್ತದೆ. ಸಂಬಂಧಪಟ್ಟ ನ್ಯಾಯಾಲಯಗಳು ಒಮ್ಮೆ ಈ ಪ್ರಕ್ರಿಯೆಯನ್ನು ಸಿಐಎಸ್ ಮೂಲಕ ಅಳವಡಿಸಿಕೊಂಡರೆ, ಇದು ವಿದ್ಯುನ್ಮಾನ ಪ್ರಪತ್ರದಲ್ಲಿನ ಎನ್‍ಎಸ್‍ಟಿಇಪಿ ವೆಬ್ ಅರ್ಜಿಯಲ್ಲಿ ಲಭ್ಯವಾಗುವಂತಾಗುತ್ತದೆ. ಎನ್‍ಎಸ್‍ಟಿಇಪಿ ವೆಬ್ ಅರ್ಜಿಯ ಸೇವೆಯನ್ನು ಅವರ ಅಧಿಕಾರ ವ್ಯಾಪ್ತಿಯೊಳಗೆ ನೀಡಬೇಕಿದ್ದರೆ, ಅಮೀನರುಗಳಿಗೆ ಪ್ರಕಟಿತ ಪ್ರಕ್ರಿಯೆಗಳ ಹಂಚಿಕೆಯನ್ನು ಸಮರ್ಥಿಸುತ್ತದೆ. ಸಂಬಂಧಪಟ್ಟ ಅಂತರ್ ಜಿಲ್ಲಾ ಅಥವಾ ಅಂತರ್ ರಾಜ್ಯ, ನ್ಯಾಯಾಲಯ ಸಿಬ್ಬಂದಿಗಳಿಗೆ ಪ್ರಕಟಿತ ಪ್ರಕ್ರಿಯೆಯ ಹಂಚಿಕೆಯ ಸೌಲಭ್ಯವನ್ನು ಸಹ ಒದಗಿಸುತ್ತದೆ.
ಅಮೀನರುಗಳು ಎನ್‍ಎಸ್‍ಟಿಇಪಿ ಮೊಬೈಲ್ ಆ್ಯಪ್‍ನಲ್ಲಿ ಹಂಚಿಕೆಯಾದ ಪ್ರಕ್ರಿಯೆಗಳನ್ನು ನೋಡಬಹುದು. ನ್ಯಾಯಾಲಯಗಳ ಸೇವಾ ಮಾದರಿಗಳೊಂದಿಗೆ ಸಮಗ್ರಗೊಂಡಿರುವ ಆ್ಯಂಡ್ರಾಯ್ಡ್ ಸ್ಮಾರ್ಟ್‍ಫೋನ್‍ಗಳನ್ನು ಅಮೀನರುಗಳಿಗೆ ನೀಡಲಾಗಿರುತ್ತವೆ. ಅಮೀನರುಗಳು ಜಿಐಎಸ್ ಸ್ಥಳವನ್ನು ಸ್ವೀಕರಿಸಿದವರ ಫೋಟೊವನ್ನು ಅಥವಾ ಆವರಣಗಳನ್ನು (ನೀಡಲು ಸಾಧ್ಯವಾಗದಿರುವಲ್ಲಿ) ಸ್ವೀಕರಿಸಿದವರ ಸಹಿಯನ್ನು ಹಾಗೂ ನೀಡಲು ಆಗದಿರುವುದಕ್ಕೆ ಕಾರಣಗಳ ಸ್ಥಳ ದಾಖಲೆಯನ್ನು ಸೆರೆಹಿಡಿಯಬಹುದು, ಸೆರೆಹಿಡಿಯಲಾದ ದತ್ತಾಂಶವು ಕೂಡಲೇ ಕೇಂದ್ರ ಎನ್‍ಎಸ್‍ಟಿಇಪಿ ಅಪ್ಲಿಕೇಷನ್‍ಗಳಿಗೆ ರವಾನೆಯಾಗುತ್ತದೆ. ಆಗ ದತ್ತಾಂಶವನ್ನು ಎನ್‍ಎಸ್‍ಟಿಇಪಿ ವೆಬ್ ಅಪ್ಲಿಕೇಷನ್‍ನಿಂದ ಸಿಐಎಸ್‍ಗೆ ಕಳುಹಿಸಲಾಗುತ್ತದೆ, ಇದು ನ್ಯಾಯಾಲಯಗಳಿಗೆ ಸೇವೆಯ ಸ್ಥಿತಿಯನ್ನು ಕಂಡು ಹಿಡಿಯಲು ಅನುವು ಮಾಡಿಕೊಡಲಾಗುವುದು. ಎನ್‍ಎಸ್‍ಟಿಇಪಿ ಈ ಮುಂದಿನ ಮಹತ್ವದ ಗುರಿಗಳನ್ನು ಅನುಸರಿಸುತ್ತದೆ.
- ವಿದ್ಯುನ್ಮಾನ ನಮೂನೆಯಲ್ಲಿ ನೋಟೀಸು/ಸಾಮನುಗಳನ್ನು ಹೊರಡಿಸಲು ಸಾಧ್ಯವಾಗುತ್ತದೆ.
- ಒಳಭಾಗದ ಸ್ಥಳದಿಂದ, ಸ್ಥಳನಿಯುಕ್ತ ಹಾಗೂ ದಾಖಲಿಸಿದ ಸರಿಯಾದ ಸಮಯವನ್ನು ದಾಖಲಿಸುತ್ತದೆ, ಪ್ರಕ್ರಿಯಾ ಸೇವೆಯಲ್ಲಿ ಅತೀ ವಿಳಂಬವಾಗುವುದನ್ನು ಇಳಿಸುತ್ತದೆ.
- ಅಂಚೆಯನ್ನು ವಿದ್ಯುನ್ಮಾನ ನಮೂನೆಯಲ್ಲಿ ನೀಡುವ ಮೂಲಕ ಅಂತರ್ ಜಿಲ್ಲಾ ಅಥವಾ ಅಂತರ್ ರಾಜ್ಯ ಸೇವೆಗೆ ಬೇಕಾಗುವ ಸಮಯವನ್ನು ಉಳಿಸುತ್ತದೆ.
- ಎಲ್ಲಾ ಹಿತಾಶಕ್ತಿದಾರರ ಪ್ರಕ್ರಿಯೆ ಹಾಗೂ ಸಮನುಗಳ ಸೇವೆಯ ಪಾರದರ್ಶಕ ಮಾರ್ಗ.
- ಭುವನ್ ಮ್ಯಾಪ್‍ಗಳೊಂದಿಗೆ ಜಿಪಿಎಸ್ ಸಂಬಂಧ (ಇಸ್ರೋ ಅಭಿವೃದ್ಧಿ ಪಡಿಸಿದ ಭಾರತದ ಜಿಯೋ-ಪ್ಲಾಟ್‍ಫಾರ್ಮ್)