ಕರ್ನಾಟಕ ಉಚ್ಚ ನ್ಯಾಯಾಲಯ
ಕರ್ನಾಟಕ ಉಚ್ಚ ನ್ಯಾಯಾಲಯ, ಬೆಂಗಳೂರು
ಕಬ್ಬನ್ ಪಾರ್ಕ್‌ನ ಹಸಿರು, ವಿಸ್ತಾರವಾದ ಹುಲ್ಲುಹಾಸಿನ ಮೇಲೆ ಅಟ್ಟಾರ ಕಚೇರಿ ಇದೆ, ಇದು ಕರ್ನಾಟಕದ ಉಚ್ಚ ನ್ಯಾಯಾಲಯದ ನೆಲೆಯಾಗಿದೆ. ಇದು ಬೆಂಗಳೂರು ನಗರದಲ್ಲಿ ವಿಧಾನ ಸೌಧದ ಎದುರು ಹೃದಯಭಾಗದಲ್ಲಿದೆ, ಇದು ರಾಜ್ಯ ಶಾಸಕಾಂಗ ಮತ್ತು ಸಚಿವಾಲಯವನ್ನು ಹೊಂದಿದೆ. ಪ್ರಜಾಪ್ರಭುತ್ವದ ಸ್ತಂಭಗಳ ನಡುವಿನ ರಸ್ತೆಗೆ ಭಾರತೀಯ ಸಂವಿಧಾನದ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಗೌರವಾರ್ಥವಾಗಿ ‘ಅಂಬೇಡ್ಕರ್ ವೀಧಿ’ ಎಂದು ಹೆಸರಿಸಲಾಗಿದೆ, ಇದು ಕಾರ್ಯಾಂಗವನ್ನು ನ್ಯಾಯಾಂಗದಿಂದ ಸ್ಪಷ್ಟವಾಗಿ ಪ್ರತ್ಯೇಕಿಸುತ್ತದೆ.
ಕರ್ನಾಟಕ ರಾಜ್ಯದ ಪ್ರಾದೇಶಿಕ ಏಕೀಕರಣ:
ಪ್ರಸಿದ್ಧ ಅಮೇರಿಕನ್ ನ್ಯಾಯಾಧೀಶರು ಮತ್ತು ನ್ಯಾಯಶಾಸ್ತ್ರಜ್ಞ, ಆಲಿವರ್ ವೆಂಡೆಲ್ ಹೋಮ್ಸ್ ಜೂನಿಯರ್ ಅವರ “ಕಾನೂನು ಎಂಬುದು ಅದರದೇ ಆದ ಒಂದು ಅನುಭವವಾಗಿದೆ” ಎಂಬ ಚಿಂತನೆಯು ಕಾನೂನನ್ನು ಎತ್ತಿಹಿಡಿಯುವ ಸಂಸ್ಥೆಗಳಿಗೆ ಸಂಬಂಧಪಟ್ಟಂತೆ ನಿಜವಾಗಿರುತ್ತದೆ.
ಕರ್ನಾಟಕ ರಾಜ್ಯದ ನ್ಯಾಯಾಂಗ ಸಂಸ್ಥೆಗಳ ಯಾವುದೇ ಅಧ್ಯಯನವು ಮೂರು ವಿಭಿನ್ನ ಪ್ರಾದೇಶಿಕ ನ್ಯಾಯವ್ಯಾಪ್ತಿಗಳನ್ನು ಮನಸ್ಸಿನಲ್ಲಿಟ್ಟುಕೊಳ್ಳಬೇಕು ಅವುಗಳೆಂದರೆ – ಹಿಂದಿನ ಮೈಸೂರು ರಾಜ್ಯ ಬಾಂಬೆ – ಕರ್ನಾಟಕ ಪ್ರದೇಶ, ಮತ್ತು ಹೈದರಾಬಾದ್ – ಕರ್ನಾಟಕ ಪ್ರದೇಶ. ಜೊತೆಗೆ ಕರ್ನಾಟಕದ ಕರಾವಳಿ ಪ್ರದೇಶಗಳು [ಮಂಗಳೂರು ಪ್ರದೇಶ] ಮತ್ತು ಹಿಂದಿನ ಬ್ರಿಟಿಷ್ ಭಾರತದ ಭಾಗವಾಗಿದ್ದ ಕೂರ್ಗ್ (ಕೊಡಗು). ಕರ್ನಾಟಕ ರಾಜ್ಯದ ಮರು-ಸಂಘಟನೆಯಾದಾಗ, ಮೈಸೂರು ರಾಜ್ಯವನ್ನು ರೂಪಿಸಲು ಎಲ್ಲಾ ವಿಭಿನ್ನ ಪ್ರಾದೇಶಿಕ ನ್ಯಾಯವ್ಯಾಪ್ತಿಗಳನ್ನು ಮೈಸೂರು ರಾಜ್ಯವನ್ನು ರೂಪಿಸಲು ವಿಲೀನಗೊಳಿಸಲಾಯಿತು. ಮೈಸೂರು ರಾಜ್ಯವನ್ನು 1ನೇ ನವೆಂಬರ್ 1973 ರಂದು ಕರ್ನಾಟಕ ಎಂದು ಮರುನಾಮಕರಣ ಮಾಡಲಾಯಿತು.
ಕರ್ನಾಟಕ ಉಚ್ಚ ನ್ಯಾಯಾಲಯ, ಧಾರವಾಡ ಪೀಠ
ಕರ್ನಾಟಕ ಉಚ್ಚ ನ್ಯಾಯಾಲಯದ ಧಾರವಾಡ ಪೀಠವು 04-07-2008 ರಲ್ಲಿ ಸ್ಥಾಪನೆಯಾಯಿತು.
ಬಾಗಲಕೋಟೆ, ಬಳ್ಳಾರಿ, ಬೆಳಗಾವಿ, ಧಾರವಾಡ, ಗದಗ, ಹಾವೇರಿ, ಉತ್ತರ ಕನ್ನಡ, ಕಾರವಾರ ಮತ್ತು ಕೊಪ್ಪಳ ಜಿಲ್ಲೆಗಳಲ್ಲಿ ಉದ್ಭವಿಸುವ ಪ್ರಕರಣಗಳನ್ನು ಧಾರವಾಡದ ಪೀಠದಲ್ಲಿ ವಿಚಾರಣೆ ನಡೆಸಿ ತೀರ್ಮಾನಿಸಲಾಗುತ್ತದೆ.
ಧಾರವಾಡದ ಪೀಠವು ದಿನಾಂಕ 04.07.2008 ರಂದು ಗೌರವಾನ್ವಿತ ಡಾ. ನ್ಯಾಯಮೂರ್ತಿ ಕೆ.ಜಿ. ಬಾಲಕೃಷ್ಣನ್, ಭಾರತದ ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಇವರಿಂದ, ಕರ್ನಾಟಕ ಉಚ್ಚ ನ್ಯಾಯಾಲಯದ ಗೌರವಾನ್ವಿತ ಮುಖ್ಯ ನ್ಯಾಯಮೂರ್ತಿ ಸಿರಿಯಾಕ್ ಜೋಸೆಫ್ ಅವರ ಅಧ್ಯಕ್ಷತೆಯಲ್ಲಿ, ಮುಖ್ಯ ಅತಿಥಿಗಳಾಗಿ ಶ್ರೀ. ಬಿ.ಎಸ್. ಯಡಿಯೂರಪ್ಪ, ಕರ್ನಾಟಕದ ಮಾನ್ಯ ಮುಖ್ಯಮಂತ್ರಿಗಳು ಮತ್ತು ಮಾನ್ಯ ಶ್ರೀ ನ್ಯಾಯಮೂರ್ತಿ ಆರ್.ವಿ. ರವೀಂದ್ರನ್, ನ್ಯಾಯಾಧೀಶರು, ಭಾರತದ ಸರ್ವೋಚ್ಚ ನ್ಯಾಯಾಲಯ ಇವರ ಸಮಕ್ಷಮದಲ್ಲಿ ಉದ್ಘಾಟಿಸಲ್ಪಟ್ಟಿತ್ತು.
ದಿನಾಂಕ 24-08-2013 ರಂದು ಧಾರವಾಡದಲ್ಲಿ ಕರ್ನಾಟಕ ಉಚ್ಚ ನ್ಯಾಯಾಲಯದ ಖಾಯಂ ಪೀಠದ ಕಾರ್ಯಾರಂಭವಾಯಿತು. ಖಾಯಂ ಪೀಠವನ್ನು ಭಾರತದ ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರಾದ ಗೌರವಾನ್ವಿತ ಶ್ರೀ ನ್ಯಾಯಮೂರ್ತಿ ಎಚ್.ಎಲ್.ದತ್ತು ಅವರು ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಮಾನ್ಯ ಶ್ರೀ ನ್ಯಾಯಮೂರ್ತಿ ಡಿ.ಹೆಚ್.ವಘೇಲಾ, ಮುಖ್ಯ ನ್ಯಾಯಮೂರ್ತಿ, ಕರ್ನಾಟಕ ಉಚ್ಚ ನ್ಯಾಯಾಲಯ ಇವರು ವಹಿಸಿದ್ದರು.
ಕರ್ನಾಟಕ ಹೈಕೋರ್ಟ್, ಕಲಬುರಗಿ ಪೀಠ
ಕರ್ನಾಟಕ ಉಚ್ಚ ನ್ಯಾಯಾಲಯದ ಕಲಬುರಗಿ ಪೀಠವು ದಿನಾಂಕ 05-07-2008 ರಂದು ಸ್ಥಾಪನೆಯಾಯಿತು. ಬೀದರ್, ಬಿಜಾಪುರ, ಕಲಬುರಗಿ ಮತ್ತು ರಾಯಚೂರು ಜಿಲ್ಲೆಗಳಲ್ಲಿ ಉದ್ಭವಿಸುವ ಪ್ರಕರಣಗಳನ್ನು ಕಲಬುರಗಿಯಲ್ಲಿರುವ ಪೀಠದಲ್ಲಿ ವಿಚಾರಣೆ ನಡೆಸಿ ತೀರ್ಮಾನಿಸಲಾಗುತ್ತದೆ. ಕಲಬುರಗಿಯ ಸಂಚಾರಿ ಪೀಠವನ್ನು ಸನ್ಮಾನ್ಯ ಡಾ. ನ್ಯಾಯಮೂರ್ತಿ ಕೆ.ಜಿ. ಬಾಲಕೃಷ್ಣ , ಭಾರತದ ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಇವರು, ಸನ್ಮಾನ್ಯ ಶ್ರೀ. ನ್ಯಾಯಮೂರ್ತಿ ಸಿರಿಯಾಕ್ ಜೋಸೆಫ್, ಮುಖ್ಯ ನ್ಯಾಯಮೂರ್ತಿ, ಕರ್ನಾಟಕ ಹೈಕೋರ್ಟ್, ಮುಖ್ಯ ಅತಿಥಿಗಳಾಗಿ ಶ್ರೀ ಬಿ.ಎಸ್. ಯಡಿಯೂರಪ್ಪ, ಕರ್ನಾಟಕದ ಮಾನ್ಯ ಮುಖ್ಯಮಂತ್ರಿಗಳು ಮತ್ತು ಮಾನ್ಯ ಶ್ರೀ. ನ್ಯಾಯಮೂರ್ತಿ ಆರ್.ವಿ.ರವೀಂದ್ರನ್, ಭಾರತದ ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಇವರುಗಳ ಸಮಕ್ಷಮದಲ್ಲಿ ಉದ್ಘಾಟಿಸಿದರು.
ಕಲಬುರಗಿಯಲ್ಲಿ ಕರ್ನಾಟಕ ಉಚ್ಚ ನ್ಯಾಯಾಲಯದ ಖಾಯಂ ಪೀಠವು ದಿನಾಂಕ 31-08-2013 ರಿಂದ ಕಾರ್ಯಾರಂಭ ಮಾಡಿತು. ಕಲಬುರಗಿಯ ಖಾಯಂ ಪೀಠವನ್ನು ಭಾರತದ ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರಾದ ಗೌರವಾನ್ವಿತ ಶ್ರೀ ನ್ಯಾಯಮೂರ್ತಿ ವಿ.ಗೋಪಾಲಗೌಡ ಅವರು ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಮಾನ್ಯ ಶ್ರೀ ನ್ಯಾಯಮೂರ್ತಿ ಡಿ.ಹೆಚ್.ವಘೇಲಾ, ಮುಖ್ಯ ನ್ಯಾಯಮೂರ್ತಿ, ಕರ್ನಾಟಕ ಉಚ್ಚ ನ್ಯಾಯಾಲಯ ರವರು ವಹಿಸಿದ್ದರು.
ಪ್ರಸ್ತುತ ಗಣಕೀಕರಣ ಸಮಿತಿಯ ಸದಸ್ಯರ