ಆಶಿಶ್ ಜೆ. ಶಿರಧೋನ್ಕರ್
ಆಶಿಶ್ ಜೆ. ಶಿರಧೋನ್ಕರ್
ಪದನಾಮಃ ವಿಜ್ಞಾನಿ-ಎಫ್, ಎಚ್ಒಡಿ ಇ-ನ್ಯಾಯಾಲಯ ಯೋಜನೆ
ಮರಾಠವಾಡ ವಿಶ್ವವಿದ್ಯಾಲಯದಲ್ಲಿ ಕಂಪ್ಯೂಟರ್ ಸೈನ್ಸ್ ಹಾಗೂ ಇಂಜಿನಿಯರಿಂಗ್ನಲ್ಲಿ ಬಿ.ಇ. ಪದವಿ, ಬಿಐಟಿಎಸ್ ಪಿಲಾನಿಯಲ್ಲಿ ಸಾಫ್ಟ್ವೇರ್ ಸಿಸ್ಟಮ್ಸ್ನಲ್ಲಿ ಎಂ.ಎಸ್. ಪದವಿ ಹಾಗೂ ಪುಣೆ ವಿಶ್ವವಿದ್ಯಾಲಯದಲ್ಲಿ ಎಲ್.ಎಲ್.ಬಿ. ಪದವಿಯನ್ನು ಪಡೆದಿರುತ್ತಾರೆ. ಇ-ಆಡಳಿತ ಕ್ಷೇತ್ರದಲ್ಲಿ 25 ವರ್ಷಗಳ ಮತ್ತು ನ್ಯಾಯಾಂಗದಲ್ಲಿ ತಂತ್ರಜ್ಞಾನವನ್ನು ಅನುಷ್ಠಾನಗೊಳಿಸುವಲ್ಲಿ 22 ವರ್ಷಗಳ ಅನುಭವವನ್ನು ಪಡೆದಿರುತ್ತಾರೆ.
• 1994ರಲ್ಲಿ ವೈಜ್ಞಾನಿಕ ಅಧಿಕಾರಿ / ಇಂಜಿನಿಯರ್ “ಎಸ್ಬಿ”ಯಾಗಿ ರಾಷ್ಟ್ರೀಯ ಮಾಹಿತಿ ಕೇಂದ್ರಕ್ಕೆ ಸೇರ್ಪಡೆಗೊಂಡಿರುತ್ತಾರೆ. ಜಿಲ್ಲಾ ಮಾಹಿತಿ ಅಧಿಕಾರಿ, ಲಾತೂರ್, ಜಿಲ್ಲಾ ಮಾಹಿತಿ ಅಧಿಕಾರಿ, ನಾಂದೇಡ ಮತ್ತು ಪುಣೆಯ ರಾಷ್ಟ್ರೀಯ ಮಾಹಿತಿ ಕೇಂದ್ರದಲ್ಲಿ ವ್ಯವಸ್ಥಾಪಕರಾಗಿ ಸೇವೆ ಸಲ್ಲಿಸಿರುತ್ತಾರೆ. 1998ರಲ್ಲಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ನಾಂದೇಡದಲ್ಲಿ ಡಿಸಿಐಎಸ್.ಗಳನ್ನು ಅನುಷ್ಠಾನಗೊಳಿಸಿರುತ್ತಾರೆ.
• 2005ರಲ್ಲಿ ಮಹಾರಾಷ್ಟ್ರ ನ್ಯಾಯಾಲಯಗಳಲ್ಲಿ ಮುಕ್ತ ಮೂಲ ತಂತ್ರಜ್ಞಾನದ ಕುರಿತು ಮೊಕದಮ್ಮೆಗಳ ಮಾಹಿತಿ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿ ಮತ್ತು ಅನುಷ್ಠಾನಗೊಳಿಸಿರುತ್ತಾರೆ.
• ರಾಷ್ಟ್ರೀಯ ಮಾಹಿತಿ ಕೇಂದ್ರ ಎಸ್ಡಿಯು, ಪುಣೆ ಇಲ್ಲಿ ಇ-ನ್ಯಾಯಾಲಯಗಳ ಯೋಜನೆಯ ವಿಭಾಗದ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿರುತ್ತಾರೆ.