ಶ್ರೀ ಅತುಲ್ ಮಧುಕರ್ ಕುರ್ಖೇಕರ್
ಶ್ರೀ ಅತುಲ್ ಮಧುಕರ್ ಕುರ್ಖೇಕರ್
ಇ-ಮೇಲ್ ವಿಳಾಸಃ mpm-ecommittee[at]aij[dot]gov[dot]in ಪದನಾಮಃ ಸದಸ್ಯ ಕಾರ್ಯವಿಧಾನ
ನಾಗ್ಪುರದಿಂದ ವಿಜ್ಞಾನದಲ್ಲಿ (ಬಿ.ಎಸ್‍ಸಿ) ಪದವಿ; ನಾಗ್ಪುರದ ಡಾ|| ಬಾಬಾ ಸಾಹೇಬ್ ಅಂಬೇಡ್ಕರ್ ಕಾಲೇಜ್ ಆಫ್ ಲಾದಿಂದ ಎಲ್.ಎಲ್.ಬಿ. ಪದವಿ; ಯು.ಬಿ.ಯು.ಎನ್.ಟಿ.ಯು. ಮತ್ತು ಸಿ.ಐ.ಎಸ್. ನಲ್ಲಿ ಪ್ರಮಾಣೀಕೃತ ಮಾಸ್ಟರ್ ಟ್ರೈನರ್, ನಾಗ್ಪುರ ನ್ಯಾಯಪೀಠ, ಬಾಂಬೆ ಉಚ್ಛ ನ್ಯಾಯಾಲಯ ಮತ್ತು ನಾಗ್ಪುರದ ಜಿಲ್ಲಾ ನ್ಯಾಯಾಲಯದಲ್ಲಿ ಸಿವಿಲ್ ಮತ್ತು ಕ್ರಿಮಿನಲ್ ವಕೀಲರಾಗಿ ಎಂಟು ವರ್ಷಗಳ ಕಾಲ ಕಾನೂನು ವೃತ್ತಿ.
• ಜೂನಿಯರ್ ಡಿವಿಷನ್ ಮತ್ತು ಜೆ.ಎಂ.ಎಫ್.ಸಿ.ಯಲ್ಲಿ ಸಿವಿಲ್ ಜಡ್ಜ್ ಆಗಿ ಅಕ್ಟೋಬರ್ 1995 ರಿಂದ ಜನವರಿ 2004 ರವರೆಗೆ ಕಾರ್ಯನಿರ್ವಹಣೆ ಮತ್ತು ನಂತರ ಜನವರಿ 2004 ರಿಂದ ಉಪ ರಿಜಿಸ್ಟ್ರಾರ್ ಆಗಿ ನೇಮಕಗೊಳ್ಳುವವರೆಗೆ ಹಿರಿಯ ಸಿವಿಲ್ ನ್ಯಾಯಾಧೀಶರಾಗಿ ನೇಮಕ.
• ಮುಂಬೈನ ಲಘು ವಿವಾಧಗಳ ನ್ಯಾಯಾಧೀಶರಾಗಿ ನೇಮಕಗೊಳ್ಳುವವರೆಗೆ ಸೆಪ್ಟಂಬರ್ 2004 ರಿಂದ ಬಾಂಬೆ ಹೈಕೋರ್ಟ್‍ನ ನಾಗ್ಪುರ ಪೀಠದ ಉಪ ರಿಜಿಸ್ಟ್ರಾರ್‍ರಾಗಿ (ನ್ಯಾಯಿಕ) ನೇಮಕ.
• ಮಹಾರಾಷ್ಟ್ರ ನ್ಯಾಯಾಂಗ ಅಕಾಡೆಮಿಯಲ್ಲಿ ನೇಮಕಾತಿ ಹೊಂದುವವರೆಗೆ ಮೇ 2008 ರಿಂದ ಮುಂಬೈನ ಸಣ್ಣ ವ್ಯಾಜ್ಯಗಳ ನ್ಯಾಯಾಲಯದ ನ್ಯಾಯಾಧೀಶರಾಗಿ ನೇಮಕ.
• ಪುಣೆಯಲ್ಲಿ ನ್ಯಾಯಾಧೀಶರಾಗಿ ನೇಮಕಗೊಳ್ಳುವವರೆಗೆ ಆಡಳಿತಾಧಿಕಾರಿಯಾಗಿ (ಜುಲೈ 2009 – ಏಪ್ರಿಲ್ 2011) ಕಾರ್ಯನಿರ್ವಹಣೆ ಮತ್ತು ನಂತರ ಮಹಾರಾಷ್ಟ್ರ ನ್ಯಾಯಾಂಗ ಅಕಾಡೆಮಿಯ ಹೆಚ್ಚುವರಿ ನಿರ್ದೇಶಕರಾಗಿ (ಏಪ್ರಿಲ್ 2011 – ಸೆಪ್ಟಂಬರ್ 2013) ಕಾರ್ಯನಿರ್ವಹಣೆ.
• ಸೆಪ್ಟಂಬರ್ 2013 ರಿಂದ ನವೆಂಬರ್ 2014 ರವರೆಗೆ ಪುಣೆಯ ಜಿಲ್ಲಾ ಮತ್ತು ಸಹಾಯಕ ಸೆಷನ್ಸ್ ನ್ಯಾಯಾಧೀಶರಾಗಿ ನೇಮಕ ಮತ್ತು ನಂತರ ನವೆಂಬರ್ 2014 ರಿಂದ ರಿಜಿಸ್ಟ್ರಾರ್ ಆಗಿ ನೇಮಕಗೊಳ್ಳುವವರೆಗೆ ಸೆಷನ್ಸ್, ನಗರ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ, ಮುಂಬೈ ಇಲ್ಲಿ ಭ್ರಷ್ಟಾಚಾರ ನಿಗ್ರಹ ಮೊಕದ್ದಮೆಗಳ ವಿಶೇಷ ನ್ಯಾಯಾಲಯದ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶರಾಗಿ ನೇಮಕ.
• ಮೇ 2016 ರಿಂದ ಇ-ಸಮಿತಿಯ ಸದಸ್ಯ-ಕಾರ್ಯವಿಧಾನ ಇಲ್ಲಿ ನೇಮಕಗೊಳ್ಳುವವರೆಗೆ ಬಾಂಬೆ ಉಚ್ಛ ನ್ಯಾಯಾಲಯದಲ್ಲಿ ರಿಜಿಸ್ಟ್ರಾರ್ (ಕಾನೂನು ಮತ್ತು ಸಂಶೋಧನೆ) ಆಗಿ ನೇಮಕ.