ಐ.ಸಿ.ಜೆ.ಎಸ್.
ಐ.ಸಿ.ಜೆ.ಎಸ್ (ಆಂತರಿಕ ಚಾಲನಾ ಅಪರಾಧ ನ್ಯಾಯ ವ್ಯವಸ್ಥೆ)
ಭಾರತದ ಸರ್ವೋಚ್ಛ ನ್ಯಾಯಾಲಯದ ಇ-ಸಮಿತಿಯ ಮೂಲಕ ಭಾರತೀಯ ನ್ಯಾಯಾಂಗದಲ್ಲಿ ಮಾಹಿತಿ ಸಂವಹನ ತಂತ್ರಜ್ಞಾನವನ್ನು (ಐಸಿಟಿ) ಅನುಷ್ಠಾನಗೊಳಿಸುವುದಕ್ಕಾಗಿ ರಾಷ್ಟ್ರೀಯ ನೀತಿ ಮತ್ತು ಕ್ರಿಯಾ ಯೋಜನೆಯನ್ನು ಸಿದ್ಧಪಡಿಸುವುದರೊಂದಿಗೆ ನ್ಯಾಯಾಂಗ ಕಾರ್ಯಕ್ಷೇತ್ರದಲ್ಲಿ ಮಾಹಿತಿ ತಂತ್ರಜ್ಞಾನದ ಬಳಕೆ ಮಾಡಲು ಪ್ರಾರಂಭವಾಯಿತು.
ಆಂತರಿಕ ಚಾಲನಾ ಅಪರಾಧ ವ್ಯವಸ್ಥೆಯನ್ನು (ಐಸಿಜೆಎಸ್)ಯು ಅಪರಾಧ ನ್ಯಾಯ ವ್ಯವಸ್ಥೆಯ ವಿವಿಧ ಆಧಾರಸ್ತಂಭಗಳಂತಹ ನ್ಯಾಯಾಲಯಗಳು, ಪೊಲೀಸ್ ಸೆರೆಮನೆಗಳು ಮತ್ತು ವಿಧಿವಿಜ್ಞಾನ ಪ್ರಯೋಗಾಲಯಗಳಿಂದ ದತ್ತಾಂಶ ಮತ್ತು ಮಾಹಿತಿಯನ್ನು ನೇರವಾಗಿ ತಡೆ ರಹಿತವಾಗಿ ಇ-ಸಮಿತಿಗೆ ಹಸ್ತಾಂತರಿಸುವುದಕ್ಕೆ ಉಪಕ್ರಮಿಸುವ ವೇದಿಕೆ ಇದಾಗಿದೆ.
ಎಲ್ಲಾ ಉಚ್ಛ ನ್ಯಾಯಾಲಯಗಳು ಮತ್ತು ಅಧೀನ ನ್ಯಾಯಾಲಯಗಳು ಎಫ್.ಐ.ಆರ್.ನ ವಸ್ತು ವಿಷಯಗಳ ದತ್ತಾಂಶವನ್ನು ಮತ್ತು ದೋಷಾರೋಪಪಟ್ಟಿಯನ್ನು ಪಡೆಯಲು ಐ.ಸಿ.ಜೆ.ಎಸ್. ವೇದಿಕೆಯ ಸಹಾಯ ಪಡೆಯುವುದು. ನ್ಯಾಯಾಲಯಗಳ ಬಳಕೆಗಾಗಿ ಪೊಲೀಸರು ಎಫ್.ಐ.ಆರ್., ಮೊಕದ್ದಮೆ ದಿನವಹಿ ಮತ್ತು ದೋಷಾರೋಪಣಾ ಪಟ್ಟಿಯಂತಹ ದಸ್ತಾವೇಜುಗಳನ್ನು ಪಿ.ಡಿ.ಎಫ್. ನಮೂನೆಯಲ್ಲಿ ಅಪ್‍ಲೋಡ್ ಮಾಡುವುದು. ಈ ಸಮಿತಿಯು ಮಾಹಿತಿ ವಿನಿಮಯಕ್ಕಾಗಿ ದತ್ತಾಂಶ ಮತ್ತು ಮೆಟಾಡೇಟಾದ ಪ್ರಮಾಣೀಕೃತಿಯ ಅಂಶ, ದತ್ತಾಂಶದ ಸಿಂಧುತ್ವ ಸಂಬಂಧದಲ್ಲಿ ಪ್ರಕ್ರಿಯೆ, ಹಿಂಬರಹ ಬಳಕೆಯ ಗುರುತುಗಳು, ಪ್ರವೇಶಿಸುವಿಕೆಯ ಇತರ ಸಂಬಂಧಪಟ್ಟ ವಿಷಯಗಳೊಂದಿಗೆ ವಿದ್ಯುನ್ಮಾನ ದಾಖಲೆಗಳನ್ನು ಸಂಗ್ರಹಿಸಲು ಮತ್ತು ಸಂರಕ್ಷಿಸುವುದಕ್ಕೆ ತಾಂತ್ರಿಕತೆಯ ಸೌಲಭ್ಯಗಳನ್ನು ಸೃಜಿಸುವಂತಹ ನಿರ್ವಹಣೆ ಕೆಲಸದÀಲ್ಲೂ ಸಹ ಅದು ಸಕ್ರೀಯವಾಗಿದೆ.
ಪ್ರತಿಯೊಂದು ರಾಜ್ಯದಲ್ಲಿ ಐ.ಸಿ.ಜೆ.ಎಸ್. ಅನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಂಡಿರುವುದನ್ನು ಖಚಿತಪಡಿಸಿಕೊಳ್ಳಲು ಉಚ್ಛ ನ್ಯಾಯಾಲಯಗಳಿಗೆ ಐ.ಪಿ.ಎಸ್. ಅಧಿಕಾರಿಯ ಸೇವೆಯನ್ನು ಪಡೆದುಕೊಳ್ಳುವುದಕ್ಕೆ ಕೋರಲಾಗಿದೆ. ಈ ಅಧಿಕಾರಿಯು ಐ.ಸಿ.ಜೆ.ಎಸ್. ವೇದಿಕೆಯಲ್ಲಿ ದತ್ತಾಂಶವನ್ನು ಸಂಯೋಜಿಸುವಂತಹ ಮಹತ್ತರವಾದ ಕೆಲಸವನ್ನು ನಿರ್ವಹಿಸುವರು. ಉಚ್ಛ ನ್ಯಾಯಾಲಯಗಳಿಗೆ ಒಬ್ಬ ನೋಡಲ್ ಅಧಿಕಾರಿಯನ್ನು ನಿಯೋಜಿಸಿಕೊಳ್ಳಲು ಕೋರಲಾಗಿದೆ. ಪೊಲೀಸ್ ಇಲಾಖೆ ಹೊರತುಪಡಿಸಿ, ಭವಿಷೈ ನಿಧಿ ಸಂಘಟನೆ, ಅರಣ್ಯ ಇಲಾಖೆ, ಪುರಸಭೆ ಪ್ರಾಧಿಕಾರಗಳು, ಕಾರ್ಮಿಕ ಕಲ್ಯಾಣ ಮಂಡಳಿಗಳು, ಪಟ್ಟಣ ಯೋಜನಾ ಪ್ರಾಧಿಕಾರಗಳು ಮತ್ತು ಆಹಾರ ಮತ್ತು ಔಷಧ ಆಡಳಿತದಂತಹ ರಾಜ್ಯದ ಇತರ ಕಾರ್ಯ ಸಂಸ್ಥೆಗಳು ಐ.ಸಿ.ಜೆ.ಎಸ್.ನ ಭಾಗವಾಗಿರುವುದನ್ನು ಖಚಿತಪಡಿಸಿಕೊಳ್ಳುವುದು ನೋಡಲ್ ಅಧಿಕಾರಿಯ ಕರ್ತವ್ಯವಾಗಿದೆ.
ಐ.ಸಿ.ಜೆ.ಎಸ್. ವೇದಿಕೆಯು ಮೊಕದ್ದಮೆ ಮತ್ತು ನ್ಯಾಯಾಲಯ ನಿರ್ವಹಣೆಯ ಸಂಬಂಧದಲ್ಲಿ ಪರಿಣಾಮಕಾರಿ ಸಾಧನವಾಗಿದೆ, ನ್ಯಾಯಾಲಯಗಳ ಬಳಕೆಗಾಗಿ ಮೊಕದ್ದಮೆಯ ಎಲ್ಲಾ ಉಪಯುಕ್ತ ಮಾಹಿತಿಯು ನೈಜ ಸಮಯದಲ್ಲಿ ಲಭ್ಯವಿರುತ್ತದೆ. ಇದರಿಂದ ನ್ಯಾಯಾಂಗ ಆದೇಶಗಳ ಮತ್ತು ಸಮನ್ಸ್‍ಗಳ ಪಾಲನೆಯನ್ನು ತ್ವರಿತವಾಗಿ ಸಾಧಿಸಲು ಸಾಧ್ಯವಾಗಿದೆ. ಪರಿಣಾಮಕಾರಿ ಸಮಯದ ನಿರ್ವಹಣೆಯನ್ನು ಅದು ಖಚಿತಪಡಿಸಿದೆ. ಅಪರಾಧ ನ್ಯಾಯ ವ್ಯವಸ್ಥೆಯ ಫಲಿತಾಂಶವನ್ನು ಗುಣಾತ್ಮಕವಾಗಿ ಮತ್ತು ಪರಿಣಾತ್ಮಕವಾಗಿ ಹೆಚ್ಚಿಸುವುಕ್ಕೆ ಈ ಐ.ಸಿ.ಜೆ.ಎಸ್. ಒಂದು ಮೈಲಿಗಲ್ಲಾಗಲಿದೆ.