ಇ-ನ್ಯಾಯಾಲಯ ಪ್ರಾಜೆಕ್ಟ್ ಅಡಿಯಲ್ಲಿ ಸಾಧಿಸಲಾದ ಮಹತ್ವದ ಮೈಲುಗಲ್ಲುಗಳು
- ಜಗತ್ತಿನಲ್ಲಿ ಮಾಹಿತಿ ಮತ್ತು ನಿರ್ವಹಣಾ ಪದ್ಧತಿ ವಿಷಯವನ್ನು ಆಧಾರಿಸಿದ ಉಚಿತ ಮತ್ತು ಮುಕ್ತ ಸಂಪನ್ಮೂಲ ಸಾಪ್ಟ್‍ವೇರ್‍ನ ಅಭಿವೃದ್ಧಿ (FOSS). ಎಫ್‍ಓಎಸ್‍ಎಸ್ ಆಧಾರಿತ ವೇದಿಕೆಯನ್ನು ಆಳವಡಿಸಿಕೊಂಡಿದ್ದರ ಪರಿಣಾಮವಾಗಿ, ಪುನರಾವರ್ತಿತ ವೆಚ್ಚಗಳನ್ನು ಹೊರತುಪಡಿಸಿ ಲೈಸೆನ್ಸ್ ಶುಲ್ಕಗಳು ಹಾಗೂ ನಿರ್ವಹಣೆಗೆ ಸಂಬಂಧಿಸಿದಂತೆÀ ದೇಶಕ್ಕೆ 340 ಕೋಟಿರೂಗಳ (3400 ಮಿಲಿಯನ್) ಉಳಿತಾಯವನ್ನು ಅಂದಾಜಿಸಲಾಗಿದೆ.
- ಸಾಮಾನ್ಯ ಪ್ರಕರಣ ನಿರ್ವಹಣೆ ಹಾಗೂ ಮಾಹಿತಿ ಪದ್ಧತಿ “ಸಿಐಎಸ್ ರಾಷ್ಟ್ರೀಯ ಕೋರ್ ವಿ 3.2” ಸಾಪ್ಟ್‍ವೇರ್ ಅನ್ನು ಭಾರತದ ಎಲ್ಲಾ ಜಿಲ್ಲಾ ಹಾಗೂ ಅಧೀನ ನ್ಯಾಯಾಲಯಗಳಿಗಾಗಿ ಸೃಜಿಸುವುದು.
- ಪ್ರಕರಣ ನಿರ್ವಹಣೆ ಹಾಗೂ ಮಾಹಿತಿ ಪದ್ಧತಿ “ಸಿಐಎಸ್ ನ್ಯಾಷನಲ್ ಕೋರ್ ವಿ 1.0” ಅನ್ನು ಭಾರತದ ಎಲ್ಲಾ 22 ಉಚ್ಛನ್ಯಾಯಾಲಯಗಳಲ್ಲಿ ಅನುಷ್ಠಾನಗೊಳಿಸಲಾಗಿದೆ.
- ದೇಶಾದ್ಯಂತ ಇರುವ 3256 ನ್ಯಾಯಾಲಯ ಸಂಕೀರ್ಣಗಳ ದತ್ತಾಂಶವು ಈಗ ಆನ್‍ಲೈನ್‍ನಲ್ಲಿ ಲಭ್ಯವಿರುತ್ತದೆ.
- 688 ಜಿಲ್ಲಾ ನ್ಯಾಯಾಲಯಗಳ ಪ್ರತ್ಯೇಕ ಜಾಲತಾಣಗಳನ್ನು ತೆರೆಯಲಾಗಿದೆ.
- ರಾಷ್ಟ್ರೀಯ ನ್ಯಾಯಿಕ ದತ್ತಾಂಶ ಗ್ರಿಡ್ (ಓಎಆಉ) ಜಿಲ್ಲಾ ಹಾಗೂ ತಾಲ್ಲೂಕು ನ್ಯಾಯಾಲಯಗಳಿಂದ 13.60 ಕೋರ್‍ಗಳ (1360 ಮಿಲಿಯನ್) (ಬಾಕಿಯಿರುವ ಹಾಗೂ ವಿಲೆಯಾದ) ದತ್ತಾಂಶವನ್ನು ಒಳಗೊಂಡಿವೆ.
- ಒಟ್ಟು 3.38 ಕೋಟಿ (338 ಮಿಲಿಯನ್) ಪ್ರಕರಣಗಳು (ಬಾಕಿ ಉಳಿದಿರುವ) ಹಾಗೂ 12.49 ಕೋಟಿ (1249 ಮಿಲಿಯನ್) ಆದೇಶಗಳು ಹಾಗೂ ಬೇರೆ ಬೇರೆ ಉಚ್ಛ ನ್ಯಾಯಾಲಯಗಳ ತೀರ್ಪುಗಳು ಆನ್‍ಲೈನ್‍ನಲ್ಲಿ ಲಭ್ಯವಿವೆ.
- 4.54 ಮಿಲಿಯನ್ ಆ್ಯಂಡ್ರಾಯ್ಡ್ ಬಳಕೆದಾರರು, ಇ-ಸಮಿಯು ಅಭಿವೃದ್ಧಿ ಪಡಿಸಿದ ಮೊಬೈಲ್ ಆ್ಯಪ್ ಅನ್ನು ಡೌನ್‍ಲೋಡ್ ಮಾಡಿಕೊಂಡಿರುವರು.