Close

    ಜಿಲ್ಲಾ ನ್ಯಾಯಾಲಯಗಳ ಪೋರ್ಟಲ್

    districts courts portal

    ದೇಶದಲ್ಲಿನ ಪ್ರತಿಯೊಂದು ಜಿಲ್ಲಾ ನ್ಯಾಯಾಲಯವು ತನ್ನದೇ ಪ್ರತ್ಯೇಕ ಜಾಲತಾಣವನ್ನು ಹೊಂದಿದೆ. ಎಲ್ಲಾ ಜಿಲ್ಲಾ ನ್ಯಾಯಾಲಯಗಳ ಜಾಲತಾಣವನ್ನು ಬಳಕೆ ಮಾಡುವ ಸಲುವಾಗಿ ಅವುಗಳನ್ನು ಜಾಲಮುಖಪುಟದಲ್ಲಿ ಕೇಂದ್ರಿಕರಿಸಲಾಗಿದೆ. 688 ಜಿಲ್ಲಾ ನ್ಯಾಯಾಲಯಗಳ ಜಾಲತಾಣಗಳಿಗೆ ಈ ಜಾಲ ಮುಖಪುಟವು ಮುಖ್ಯದ್ವಾರವಾಗಿದೆ. ಪ್ರತಿಯೊಂದು ಜಿಲ್ಲಾ ನ್ಯಾಯಾಲಯಕ್ಕೆ ಸೇರಿದ ಮಾಹಿತಿಯನ್ನು ಈ ಜಾಲ ಮುಖಪುಟದ ಮುಖಾಂತರ ಪಡೆಯಬಹುದಾಗಿದೆ.

    ಈ ಪ್ರತ್ಯೇಕ ಜಾಲತಾಣದಲ್ಲಿ ಜಿಲ್ಲೆಯಲ್ಲಿ ಕೆಲಸ ನಿರ್ವಹಿಸುತ್ತಿರುವ ನ್ಯಾಯಿಕ ಅಧಿಕಾರಿಗಳ ಪಟ್ಟಿ, ರಜೆಯ ಮೇಲಿರುವ ನ್ಯಾಯಾಧೀಶರ ಪಟ್ಟಿ, ಪ್ರಮುಖ ನೇಮಕಾತಿ ಪ್ರಕಟಣೆಗಳು, ಸುತ್ತೋಲೆಗಳು, ನ್ಯಾಯಾಲಯಗಳ ಅಧಿಕಾರಿ ವ್ಯಾಪ್ತಿ ಮತ್ತು ಪೊಲೀಸ್ ಠಾಣೆಗಳ ಪಟ್ಟಿಯು ಪ್ರದರ್ಶಿತವಾಗಿರುತ್ತದೆ. ಈ ಜಾಲ ಮುಖಪುಟದಲ್ಲಿ ಜಿಲ್ಲಾ ನ್ಯಾಯಾಲಯ ಸೇವೆಗಳಿಗೆ ಸಂಬಂಧಿಸಿದ ಮುಕ್ತ ದತ್ತಾಂಶ ಮತ್ತು ಮಾಹಿಗಳು, ಮೊಕದ್ದಮೆಯ ವಸ್ತುಸ್ಥಿತಿ, ನ್ಯಾಯಾಲಯಗಳ ಆದೇಶಗಳು, ವ್ಯಾಜ್ಯಪಟ್ಟಿಯಂತವುಗಳು ಸಹ ಲಭ್ಯವಿದೆ. ಈ ಮಾಹಿತಿಗಳು ಎಲ್ಲಿ ಬೇಕಾದರೂ ಪಡೆಯಬಹುದಾಗಿರುವುದರಿಂದ ನ್ಯಾಯಾಲಯದ ಸಂಕೀರ್ಣಗಳಿಗೆ ಭೇಟಿ ನೀಡುವುದನ್ನು ಆದಷ್ಟು ಕಡಿಮೆ ಮಾಡಬಹುದಾಗಿದೆ. ಪರಿಣಾಮವಾಗಿ ನ್ಯಾಯಾಲಯಗಳ ಭೌತಿಕ ರಚನೆಗಳ ಮೂಲ ಸೌಕರ್ಯಗಳ ಮೇಲಿನ ಒತ್ತಡವನ್ನು ತಗ್ಗಿಸಬಹುದಾಗಿದೆ.

    Visit : https://districts.ecourts.gov.in/