Close

    ಶ್ರೀ ಕುಲದೀಪ್ ಸಿಂಗ್ ಕುಶ್ವಾ

    Kuldeep Singh Kushwah
    • ಇ-ಮೇಲ್: ms-ecommittee[at]aij[dot]gov[dot]in
    • ಪದನಾಮ: ಸದಸ್ಯ-ವ್ಯವಸ್ಥೆ

    ಶ್ರೀ ಕುಲದೀಪ್ ಸಿಂಗ್ ಕುಶ್ವಾ

    ಇ-ಮೇಲ್ ms-ecommittee[at]aij[dot]gov[dot]in                         ಪದನಾಮಃ ಸದಸ್ಯ-ವ್ಯವಸ್ಥೆ

    2004ರಲ್ಲಿ ಸ್ನಾತಕೋತ್ತರ ಇಂಜಿನಿಯರಿಂಗ್ ಪದವಿಯು ಪೂರ್ಣಗೊಂಡ ನಂತರ 2011ರಲ್ಲಿ ಜಬಲ್ಪುರ(ಎಂ.ಪಿ.)ದಲ್ಲಿ ಕಾನೂನು ಪದವಿ ಪೂರ್ಣಗೊಳಿಸಿರುತ್ತಾರೆ. 1999ರಲ್ಲಿ ಕಂಪ್ಯೂಟರ್ ಸೈನ್ಸ್‍ನಲ್ಲಿ ಬಿ.ಟೆಕ್ ಪದವಿ ಪೂರ್ಣಗೊಳಿಸಿರುತ್ತಾರೆ. ಫೆಬ್ರವರಿ, 2017 ರಿಂದ 31 ಸೆಪ್ಟಂಬರ್, 2018 ರವರೆಗೆ ಭಾರತದ ಸರ್ವೋಚ್ಛ ನ್ಯಾಯಾಲಯದಲ್ಲಿ ಒಎಸ್ಡಿ (ಐಟಿ) ಆಗಿ ನೇಮಕಗೊಂಡಿರುತ್ತಾರೆ. ಜೂನ್ 2, 2008 ರಿಂದ ಮಧ್ಯಪ್ರದೇಶದ ಉಚ್ಛ ನ್ಯಾಯಾಲಯದ ರಿಜಿಸ್ಟ್ರಾರ್ (ಐಟಿ) ಆಗಿ ನೇಮಕಗೊಂಡು, ಕೇಂದ್ರ ಯೋಜನಾ ಸಮನ್ವಯಕಾರರ ಜವಾಬ್ದಾರಿಯನ್ನು ಸಹ ನಿರ್ವಹಿಸಿರುತ್ತಾರೆ.

    ಸಾಧನೆಗಳು (ತಾಂತ್ರಿ) :

    • 2019ರಲ್ಲಿ ಮಧ್ಯಪ್ರದೇಶದ ಉಚ್ಛ ನ್ಯಾಯಾಲಯದಲ್ಲಿ ಆನ್‍ಲೈನ್ ಸರ್ಟಿಫೈಡ್ ಕಾಪಿ. ಸಾಫ್ಟ್‍ವೇರ್‍ನ ಅಭಿವೃದ್ಧಿ ಮತ್ತು ಅನುಷ್ಠಾನ.
    • 2020ರಲ್ಲಿ ಮಧ್ಯಪ್ರದೇಶದ ಉಚ್ಛ ನ್ಯಾಯಾಲಯ ಮತ್ತು ವಿಚಾರಣಾಧೀನ ನ್ಯಾಯಾಲಯಗಳ ದಾಖಲೆಗಳ ಡಿಜಿಟಲೀಕರಣ ಇನ್-ಹೌಸ್ ಡಿ.ಎಂ.ಎಸ್.ನ ಅಭಿವೃದ್ಧಿ ಮತ್ತು ಅನುಷ್ಠಾನ.
    • ಸರ್ವೋಚ್ಛ ನ್ಯಾಯಾಲಯದ ಗಣಕೀಕರಣಃ- 10 ಮೇ 2017ರಂದು ಐ.ಸಿ.ಎಂ.ಐ.ಎಸ್. ಸಾಫ್ಟ್‍ವೇರ್ ಮತ್ತು ಭಾರತದ ಸರ್ವೋಚ್ಛ ನ್ಯಾಯಾಲಯದ ಹೊಸ ವೆಬ್‍ಸೈಟ್ ಅನ್ನು ನವದೆಹಲಿಯ ವಿಜ್ಞಾನ ಭವನದಲ್ಲಿ ಮಾನ್ಯ ಪ್ರಧಾನಿ
    ಶ್ರೀ ನರೇಂದ್ರ ಮೋದಿ ಮತ್ತು ಭಾರತದ ಗೌರವಾನ್ವಿತ ಮುಖ್ಯ ನ್ಯಾಯಮೂರ್ತಿ
    ಶ್ರೀ ಜೆ.ಎಸ್. ಖೇಹರ್ ಅವರು ಉದ್ಘಾಟಿಸಿದರು.
    • 2019ರಲ್ಲಿ ಮಧ್ಯಪ್ರದೇಶದ ಉಚ್ಛ ನ್ಯಾಯಾಲಯ ಮತ್ತು ವಿಚಾರಣಾಧೀನ ನ್ಯಾಯಾಲಯಗಳಿಗೆ ಸಂಬಂಧಿಸಿದ ಸಾಫ್ಟ್‍ವೇರ್ ಮೂಲಕ ನ್ಯಾಯಿಕ ಕ್ಷೇತ್ರದ ಸಂಖ್ಯಿಕ ವಿಭಾಗದ ವಿವರಪಟ್ಟಿಗಳ ಸ್ವಯಂ-ಸೃಜನೆ. ಹಣಕಾಸು ಇಲಾಖಾ ಸಾಫ್ಟ್‍ವೇರ್ ಅಂದರೆ ಟಿ.ಸಿ.ಎಸ್. ಅಭಿವೃದ್ಧಿಪಡಿಸಿದ ಸೈಬರ್ ಖಜಾನೆಯೊಂದಿಗೆ ಇ-ನ್ಯಾಯಾಲಯ ಶುಲ್ಕಗಳ ಸಾಫ್ಟ್‍ವೇರ್‍ನ ಸಂಯೋಜನೆ.
    • 2018ರಲ್ಲಿ ಮಧ್ಯಪ್ರದೇಶದ ಉಚ್ಛ ನ್ಯಾಯಾಲಯ ಮತ್ತು ವಿಚಾರಣಾಧೀನ ನ್ಯಾಯಾಲಯಗಳಿಗೆ ಖರೀದಿಸಿದ ಎಲ್ಲಾ ಹಾರ್ಡ್‍ವೇರ್ ವಸ್ತುಗಳ ವಿವರ ಮತ್ತು ದೂರು ನಿರ್ವಹಣಾ ಸಾಫ್ಟ್‍ವೇರ್‍ನ ನಿರ್ವಹಣೆ.
    • ಆನ್‍ಲೈನ್ ಮಾಹಿತಿ ಹಕ್ಕು ಸಾಫ್ಟ್‍ವೇರ್ ಅನ್ನು 2017ರಲ್ಲಿ ಅಭಿವೃದ್ಧಿಪಡಿಸಲಾಗಿರುತ್ತದೆ.
    • 2018ರಲ್ಲಿ ಸಿಎಮ್‍ಐಎಸ್ ಸಾಫ್ಟ್‍ವೇರ್‍ಗೆ ಸಂಬಂಧಿಸಿದಂತೆ ಮಧ್ಯಪ್ರದೇಶದ
    ಉಚ್ಛ ನ್ಯಾಯಾಲಯದಲ್ಲಿ ಕ್ಲೌಡ್ ತಂತ್ರಜ್ಞಾನವನ್ನು ಅನುಷ್ಠಾನ ಗೊಳಿಸಲಾಗಿರುತ್ತದೆ. ಮಧ್ಯಪ್ರದೇಶದ ಉಚ್ಛ ನ್ಯಾಯಾಲಯ / ವಿಚಾರಣಾಧೀನ ನ್ಯಾಯಾಲಯಗಳಲ್ಲಿ
    ಇ-ಆಟೆಂಡೆನ್ಸ್‍ನ ಅನುಷ್ಠಾನ.
    • ಮಧ್ಯಪ್ರದೇಶದ ಉಚ್ಛ ನ್ಯಾಯಾಲಯದೊಂದಿಗೆ ಅಡ್ವೊಕೇಟ್ ಜನರಲ್ ಕಛೇರಿಯ ಸಂಯೋಜನಾ ಸಾಫ್ಟ್‍ವೇರ್. 2016ರಲ್ಲಿ ಉಚ್ಛ ನ್ಯಾಯಾಲಯದ ಯುಕ್ತವಾಗಿ ಸ್ಕ್ಯಾನ್ ಮಾಡಿದ / ಡಿಜಿಟೈಸ್ಡ್ ಮಾಡಿದ ಮಾಹಿತಿಯನ್ನು ಡೌನ್‍ಲೋಡ್
    ಮಾಡಲು / ವೀಕ್ಷಿಸಲು ಅಡ್ವೊಕೇಟ್ ಜನರಲ್ ಕಛೇರಿಯ ಬಳಕೆದಾರರಿಗೆ ಲಾಗಿನ್-ಐಡಿ ಮತ್ತು ಪಾಸ್‍ವರ್ಡ್‍ನ್ನು ಒದಗಿಸಲಾಗಿರುತ್ತದೆ.
    • ಉಚ್ಛ ನ್ಯಾಯಾಲಯದ ನ್ಯಾಯಿಕ ಅಧಿಕಾರಿಗಳು / ಉದ್ಯೋಗಿಗಳಿಗೆ ವಿಚಾರಣಾಧೀನ ನ್ಯಾಯಾಲಯಗಳ ಉದ್ಯೋಗಿಗಳಿಗೆ ಸಂಬಂಧಿಸಿದ ವೈಯಕ್ತಿಕ ಮಾಹಿತಿ ವ್ಯವಸ್ಥೆಯ ಸಾಫ್ಟ್‍ವೇರ್‍ನ ಅಭಿವೃದ್ಧಿ ಮತ್ತು ಅನುಷ್ಠಾನ.
    • ಭಾರತೀಯ ಕಾನೂನು ವರದಿ ಮತ್ತು ನ್ಯಾಯಿಕ ಅಧಿಕಾರಿಗಳ ತರಬೇತಿ ಸಂಸ್ಥೆಯ ಪತ್ರಿಕಾ ಸಾಫ್ಟ್‍ವೇರ್‍ನ ಅಭಿವೃದ್ಧಿ ಮತ್ತು ಅನುಷ್ಠಾನ.
    • ಉಚ್ಛ ನ್ಯಾಯಾಲಯಕ್ಕೆ ಸಂಬಂಧಿಸಿದ ಸಿಎಮ್‍ಐಎಸ್ ಸಾಫ್ಟ್‍ವೇರ್‍ನ ಅಭಿವೃದ್ಧಿ ಮತ್ತು ಅನುಷ್ಠಾನಃ- ಈ ಸಾಫ್ಟ್‍ವೇರ್ ಉದ್ಯಮ, ಸಂಪನ್ಮೂಲ ಯೋಜನಾ ಪರಿಕಲ್ಪನೆಯನ್ನು ಆಧರಿಸಿದ್ದು, ಅದರ ಮೂಲಕ ಉಚ್ಛ ನ್ಯಾಯಾಲಯದ ಭವಿಷ್ಯದ ಅಗತ್ಯತೆಗಳನ್ನು ಪೂರೈಸಲು ಪ್ರತಿ ಸಂಪನ್ಮೂಲವನ್ನು ಮಾನವ ಸಂಪನ್ಮೂಲ, ಮೂಲ ಸೌಕರ್ಯ, ಸಮಯ ನಿರ್ವಹಣೆ ಮುಂತಾದಂಥವುಗಳನ್ನು ಅತ್ಯುತ್ತಮವಾಗಿ ಬಳಸಿಕೊಳ್ಳಲಾಗುವುದು. ಎಲ್ಲಾ ಸಿಬ್ಬಂದಿ ವರ್ಗದವರು ಕಂಪ್ಯೂಟರ್ ಪ್ರೋಗ್ರಾಂ ಮೂಲಕ ಅವರಿಗೆ ನಿಯೋಜಿಸಲಾದ ಏಕರೂಪದ ಕಾರ್ಯಹಂಚಿಕೆಯನ್ನು ಪೂರ್ಣಗೊಳಿಸಲು ಉತ್ತರದಾಯಿಗಳು, ಜವಾಬ್ದಾರರು ಆಗಿರುತ್ತಾರೆ. ಸಿಬ್ಬಂದಿ ವರ್ಗದವರಿಗೆ ಈ ಸಾಫ್ಟ್‍ವೇರ್‍ಅನ್ನು ದಿನದ ಆಧಾರದ ಮೇಲೆ ಸಿಬ್ಬಂದಿ ವರ್ಗದವರಿಗೆ ವರ್ಚುವಲ್ ಕೆಲಸವನ್ನು ನಿಗದಿಪಡಿಸಲು ಅಭಿವೃದ್ಧಿಪಡಿಸಲಾಗಿದೆ. ಅವರ ಕೆಲಸದ ಹೊರೆಯನ್ನು ಕಡಿಮೆ ಮಾಡಿ ದಕ್ಷತೆಯ ಮಟ್ಟವನ್ನು ಉತ್ತಮಪಡಿಸಲು ಇ-ಮೆಮೋಗಳನ್ನು ಡಿಜಿಟಲ್ ಸಹಿ ಮಾಡಿ ಸಂಬಂಧಪಟ್ಟ ಬಳಕೆದಾರರಿಗೆ ಆಯಾ ಮೇಲ್ ಐ.ಡಿ.ಗಳಲ್ಲಿ ರವಾನಿಸಬಹುದು. ಆಟೋ-ಜೆನೆರೇಟೆಡ್ ಕಂಪ್ಯೂಟರ್ ಸಾಫ್ಟ್‍ವೇರ್ ವ್ಯವಸ್ಥೆಯು 2014ರಲ್ಲಿ ಕಾಲಾನುಕ್ರಮದಲ್ಲಿ ಪ್ರಕರಣಗಳನ್ನು ಪಟ್ಟಿ ಮಾಡಿ ಪ್ರತಿದಿನದ ಆಧಾರದ ಮೇಲೆ ಅಂದು ಲಭ್ಯವಿರುವ ನ್ಯಾಯಾಧೀಶರ ನಡುವೆ ಕೆಲಸದ ಹೊರೆಯನ್ನು ಸಮಾನವಾಗಿ ಹಂಚಿಕೆ ಮಾಡುವುದರೊಂದಿಗೆ, ಆದ್ಯತೆಗಳನ್ನು ನಿರ್ದಿಷ್ಟಪಡಿಸುವುದನ್ನು ಖಚಿತಪಡಿಸಿರುತ್ತದೆ.
    • 2014ರಲ್ಲಿ ಮಧ್ಯಪ್ರದೇಶದ ಉಚ್ಛ ನ್ಯಾಯಾಲಯ, ವಿಚಾರಣಾಧೀನ ನ್ಯಾಯಾಲಯಗಳು ಮತ್ತು ಕುಟುಂಬ ನ್ಯಾಯಾಲಯಗಳಿಗೆ ಸಂಬಂಧಿಸಿದಂತೆ ಸಿಎಮ್‍ಎಸ್ ದ್ವಿಭಾಷಾ ವೆಬ್‍ಸೈಟ್ ಅಭಿವೃದ್ಧಿ.
    • ವಿವಿಧ ನಾಗರಿಕ ಸೇವೆಗಳ ಅನ್ವಯಿಕೆಗಳಿಗಾಗಿ ಆಂತರಿಕವಾಗಿ ಕಿರು ಸಂದೇಶ ಕಳುಹಿಸುವ ಮತ್ತು ಇ-ಮೇಲ್ ಮಾಡುವ ವ್ಯವಸ್ಥೆಯ ಅನುಷ್ಠಾನ.
    • 2013ರಲ್ಲಿ ಮಧ್ಯಪ್ರದೇಶದ ಉಚ್ಛ ನ್ಯಾಯಾಲಯ, ವಿಚಾರಣಾಧೀನ ನ್ಯಾಯಾಲಯ ಹಾಗು ಕೌಟುಂಬಿಕ ನ್ಯಾಯಾಲಯಗಳಿಗೆ ಸಂಬಂಧಿಸಿದ ಇನ್-ಹೌಸ್ ಮ್ಯಾನೇಜ್‍ಮೆಂಟ್ ಸಾಫ್ಟ್‍ವೇರ್‍ನ ಅಭಿವೃದ್ಧಿ ಹಾಗೂ ಅನುಷ್ಠಾನ.

    ಸಾಧನೆಗಳು (ಆಡಳಿತ)

    ನಿರ್ದೇಶಕ, ಎಂಪಿಎಸ್‍ಜೆಎ ಮತ್ತು ರಿಜಿಸ್ಟ್ರಾರ್ (ಮೂಲಸೌಕರ್ಯ ಹಾಗೂ ಕಾಮಗಾರಿ) ಅವರೊಂದಿಗೆ ಸಮಾಲೋಚಿಸಿ ಮಾಹಿತಿ ತಂತ್ರಜ್ಞಾನಕ್ಕೆ ಸಂಬಂಧಿಸಿದ 14 ಮತ್ತು 15ನೇ ಹಣಕಾಸು ಆಯೋಗಕ್ಕೆ ಸಂಬಂಧಿಸಿದ ಕಾಮಗಾರಿ.
    • ವಿಡಿಯೋ ಕಣ್ಗಾವಲು, ತಾಂತ್ರಿಕ ಮಾನವ ಶಕ್ತಿ, ಡಿಜಿಟಲೀಕರಣ ಮತ್ತು ಸ್ಥಳೀಯ ಪ್ರದೇಶ ಜಾಲ ಮತ್ತು ಅವುಗಳಿಗೆ ಸಂಬಂಧಿಸಿದ ಒಪ್ಪಂದಕ್ಕೆ ಸಂಬಂಧಿಸಿದಂತೆ ಮಧ್ಯಪ್ರದೇಶ ರಾಜ್ಯದಲ್ಲಿನ ಉಚ್ಛ ನ್ಯಾಯಾಲಯ ಹಾಗೂ ವಿಚಾರಣಾಧೀನ ನ್ಯಾಯಾಲಯಗಳಿಗೆ ಸಂಬಂಧಿಸಿದ ಟೆಂಡರ್ (ಇ-ಟೆಂಡರ್).
    • ತಾಂತ್ರಿಕ ಮತ್ತು ಇತರ ಸಂಬಂಧಿತ ಮಾನವಶಕ್ತಿಯ ಹೊರಗುತ್ತಿಗೆಗೆ ಸಂಬಂಧಿಸಿದ ಕಾಮಗಾರಿ.
    • ಎಲ್ಲಾ ಜಿಲ್ಲಾ ಮತ್ತು ವಿಚಾರಣಾಧೀನ ನ್ಯಾಯಾಲಯ ಸಂಕೀರ್ಣಗಳು, ಜಿಲ್ಲಾ ಆಸ್ಪತ್ರೆಗಳು ಮತ್ತು ಸಂವಾದಿ ಬಂಧಿಖಾನೆಗಳಲ್ಲಿ ವೀಡಿಯೊ ಕಾನ್ಫರೆನ್ಸಿಂಗ್ ಸೌಲಭ್ಯವನ್ನು ಆರಂಭಿಸುವುದು.
    • ಪ್ರಧಾನ ಪೀಠವಿರುವ ಜಬಲ್ಪುರದಲ್ಲಿನ ಮಧ್ಯಪ್ರದೇಶದ ಉಚ್ಛ ನ್ಯಾಯಾಲಯ ಮತ್ತು ಗ್ವಾಲಿಯರ್‍ನಲ್ಲಿನ ಅದರ ವಿಭಾಗೀಯ ನ್ಯಾಯಪೀಠಗಳಲ್ಲಿ ವೀಡಿಯೊ ಕಾನ್ಫರೆನ್ಸಿಂಗ್ ಸೌಲಭ್ಯಗಳನ್ನು ಒದಗಿಸುವುದು. ರಾಜ್ಯ ನ್ಯಾಯಿಕ ಅಕಾಡೆಮಿಗಳು, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರಿಗಳ ಗಣಕೀಕರಣ, ಡಿಜಿಟಲೀಕರಣ ಮುಂತಾದವುಗಳ ಮೂಲಕ ನ್ಯಾಯಾಲಯ ನಿರ್ವಹಣಾ ವ್ಯವಸ್ಥೆಯನ್ನು ಸೃಜಿಸುವುದು.
    • ಮಾಹಿತಿ ತಂತ್ರಜ್ಞಾನ ಮತ್ತು ಸಲಕರಣೆಗಳಿಗೆ ಸಂಬಂಧಿಸಿದಂತೆ ಉಚ್ಛ ನ್ಯಾಯಾಲಯದ ಹಾಗೂ ವಿಚಾರಣಾಧೀನ ನ್ಯಾಯಾಲಯಗಳ ವಿವಿಧ ಬಜೆಟ್ ಶೀರ್ಷಿಕೆಗಳ ಬಜೆಟ್ ಅಂದಾಜುಗಳನ್ನು ಸಿದ್ಧಪಡಿಸುವುದು.
    • ರಾಜ್ಯ ನ್ಯಾಯಾಂಗ ಅಕಾಡೆಮಿಯೊಂದಿಗಿನ ಸಮನ್ವಯದಲ್ಲಿ ಇಡೀ ವರ್ಷ ವಿವಿಧ ಮಾಹಿತಿ ತಂತ್ರಜ್ಞಾನ ಅನ್ವಯಿಕೆಗಳನ್ನು ಕುರಿತಂತೆ ತರಬೇತಿ ಅಧಿವೇಶನವನ್ನು ಎಲ್ಲಾ ನ್ಯಾಯಿಕ ಅಧಿಕಾರಿಗಳು, ವಕೀಲರು ಮತ್ತು ನ್ಯಾಯಾಲಯಗಳ ಸಿಬ್ಬಂದಿ ವರ್ಗದವರಿಗೆ ನಡೆಸಲಾಯಿತು.